Friday, May 10, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-01-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-01-2024)

ನಿತ್ಯ ನೀತಿ : ಈ ಜಗತ್ತು ನಾವು ಹೇಳುವ ಸತ್ಯಕ್ಕಿಂತ ಮಿಗಿಲಾಗಿ ನಮ್ಮ ಕುರಿತು ಇತರರು ಹೇಳುವ ಸುಳ್ಳನ್ನು ನಂಬುತ್ತದೆ.

ಪಂಚಾಂಗ ಸೋಮವಾರ 22-01-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಮೃಗಶಿರಾ / ಯೋಗ: ಬ್ರಹ್ಮ / ಕರಣ: ಭವ

ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.16
ರಾಹುಕಾಲ : 7.30-9.00
ಯಮಗಂಡ ಕಾಲ : 10.30-12.00
ಗುಳಿಕ ಕಾಲ : 1.30-3.00

ರಾಶಿ ಭವಿಷ್ಯ
ಮೇಷ
: ಅಪವಾದಕ್ಕೆ ಗುರಿ ಮಾಡುವ ಹಿತಶತ್ರು ಗಳಿಂದ ದೂರವಿರಿ. ವ್ಯಾಪಾರಿಗಳಿಗೆ ಉತ್ತಮ ಲಾಭ.
ವೃಷಭ: ಹಳೆ ಮಿತ್ರರ ಆಗಮನವಾಗಲಿದೆ. ಉದ್ಯಮಗಳ ಬೆಳವಳಿಗೆಗೆ ಸಿದ್ಧತೆ ನಡೆಯಲಿದೆ.
ಮಿಥುನ: ವಿದೇಶ ಪ್ರಯಾಣಕ್ಕೆ ಅನುಕೂಲ ಒದಗಿ ಬರಲಿದೆ. ಪಿತ್ರಾರ್ಜಿತ ಆಸ್ತಿ ಬರಬೇಕಿದ್ದಲ್ಲಿ ತಡವಾಗಲಿದೆ.

ಕಟಕ: ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಸಿಂಹ: ಅಸಾಧ್ಯವಾದ ಅನಗತ್ಯ ಚಿಂತನೆಯಲ್ಲಿ ನಿಮ್ಮ ಶಕ್ತಿ ವ್ಯರ್ಥ ಮಾಡುವ ಬದಲು ಅದನ್ನು ಸರಿಯಾದ ದಿಕ್ಕಿನಲ್ಲಿ ಬಳಸಿ
ಕನ್ಯಾ: ಕೌಟುಂಬಿಕ ಸಮಸ್ಯೆ ಪರಿಹರಿಸಿಕೊಳ್ಳಲು ಉತ್ತಮ ಸಮಯವಾಗಿದೆ.

ತುಲಾ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.
ವೃಶ್ಚಿಕ: ವಿವಾಹಿತ ದಂಪತಿ ಸ್ಮರಣೀಯ ಕ್ಷಣಗಳನ್ನು ಕಳೆಯಲು ಸಣ್ಣ ಪ್ರವಾಸಕ್ಕೆ ಹೋಗಬಹುದು.
ಧನುಸ್ಸು: ರಕ್ತದೊತ್ತಡದ ಸಮಸ್ಯೆ ಕಾಣಿಸಿ ಕೊಳ್ಳಬಹುದು ಹಾಗೂ ಉಲ್ಬಣಿಸಬಹುದು. ಉದ್ಯೋಗದಲ್ಲಿ ಒತ್ತಡ ಕಡಿಮೆ ಆಗಲಿದೆ.

ಮಕರ: ಸಾಧ್ಯವಾದಷ್ಟೂ ರಾತ್ರಿ ಪ್ರಯಾಣ ಮಾಡು ವುದು ಬೇಡ. ನಿರೀಕ್ಷೆಗಿಂತ ಖರ್ಚು ಹೆಚ್ಚಾಗಲಿದೆ.
ಕುಂಭ: ಕೆಲಸದ ಸ್ಥಳದಲ್ಲಿ ಅನುಕೂಲಕರ ಸನ್ನಿವೇಶಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ.
ಮೀನ: ಹೆಣ್ಣುಮಕ್ಕಳಿಗೆ ಅಪವಾದಗಳು ಬರುತ್ತವೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಿನ್ನಡೆಯಾಗಬಹುದು.

RELATED ARTICLES

Latest News