Saturday, May 11, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-12-2023)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-12-2023)

ನಿತ್ಯ ನೀತಿ : ಒತ್ತಡಗಳು ಮನುಷ್ಯನನ್ನು ತಡರಾತ್ರಿಯವರೆಗೂ ಎಚ್ಚರ ಇರುವಂತೆ ಮಾಡಿದರೆ ಜವಾಬ್ದಾರಿಗಳು ಬೆಳಗ್ಗೆ ಬೇಗ ಏಳುವಂತೆ ಮಾಡುತ್ತವೆ.

ಪಂಚಾಂಗ ಭಾನುವಾರ 24-12-2023
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಕೃತ್ತಿಕಾ / ಯೋಗ: ಸಿದ್ಧ / ಕರಣ: ಕೌಲವ

ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ರಾಶಿ ಭವಿಷ್ಯ
ಮೇಷ
: ಮಿತ್ರರಲ್ಲಿ ಕಂಡುಬರುವ ಭಿನ್ನಾಭಿಪ್ರಾಯ ಹೋಗಲಾಡಿಸಲು ಯತ್ನಿಸುವಿರಿ.
ವೃಷಭ: ಬಹಳ ದಿನಗಳ ಕನಸನ್ನು ನನಸು ಮಾಡುವ ಅವಕಾಶಗಳು ಲಭಿಸಲಿವೆ.
ಮಿಥುನ: ವ್ಯವಹಾರ ಸಂಬಂಧಿ ಮಾತುಗಳು ಇಂದು ಫಲ ನೀಡಲಿವೆ. ಆರೋಗ್ಯದ ಕಡೆ ಗಮನ ಹರಿಸಿ.

ಕಟಕ: ಸಂತೋಷವನ್ನು ಇತರರೊಂದಿಗೆ ಹಂಚಿ ಕೊಳ್ಳಲು ಉತ್ತಮ ಅವಕಾಶಗಳು ಸಿಗುವುದಿಲ್ಲ.
ಸಿಂಹ: ದೈನಂದಿನ ಚಟುವಟಿಕೆ ಹೊರತುಪಡಿಸಿ ವಿಭಿನ್ನ ಕಾರ್ಯಗಳಲ್ಲಿ ಆಸಕ್ತಿ ಹೊಂದುವಿರಿ.
ಕನ್ಯಾ: ರಾಜಕೀಯ ಭವಿಷ್ಯದ ಬಗ್ಗೆ ಪ್ರಭಾವಿ ರಾಜಕಾರಣಿಯೊಂದಿಗೆ ಮಾತುಕತೆ ನಡೆಸುವಿರಿ.

ತುಲಾ: ಮಕ್ಕಳಿಗೆ ಹಿಂದೆ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳಲು ನೀವು ಶಕ್ತಿರಾಗಿರುವಿರಿ.
ವೃಶ್ಚಿಕ: ಹಲವು ದಿನಗಳಿಂದ ಬರಬೇಕಾಗಿರುವ ಹಣ ಸಂಜೆ ವೇಳೆಗೆ ಕೈ ಸೇರುವುದು.
ಧನುಸ್ಸು: ನೀವು ಯೋಚಿಸಿದಂತೆಯೇ ಸನ್ನಿವೇಶಗಳು ಎದುರಾಗಿ ಅಚ್ಚರಿ ಮೂಡಿಸಲಿವೆ.

ಮಕರ: ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಗಮನ ಹರಿಸಿ. ಅನಗತ್ಯ ಚರ್ಚೆ ಬೇಡ.
ಕುಂಭ: ತುರ್ತು ವಿಷಯಗಳ ಬಗ್ಗೆ ಹೆಚ್ಚಾಗಿ ಗಮನ ಹರಿಸಿ. ಕೌಟುಂಬಿಕ ಸಂಬಂಧಗಳು ಗಟ್ಟಿಗೊಳ್ಳಲಿವೆ.
ಮೀನ: ಮಗಳ ಮದುವೆಯ ಕಾರ್ಯಕಲಾಪಗಳು ಸುಗವಾಗಿ ಸಾಗುವುದರಿಂದ ನೆಮ್ಮದಿ ಇರಲಿದೆ.

RELATED ARTICLES

Latest News