Saturday, July 27, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-12-2023)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-12-2023)

ನಿತ್ಯ ನೀತಿ : ಮನಸ್ಸು ಮತ್ತು ಬುದ್ಧಿ ಚಂಚಲವಾಗಿದ್ದರೆ ಅಂತರಂಗದಲ್ಲಿ ಅಡಗಿರುವ ಸತ್ಯದ ಅರಿವಾಗುವುದಿಲ್ಲ.

ಪಂಚಾಂಗ ಗುರುವಾರ 28-12-2023
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಿತೀಯಾ / ನಕ್ಷತ್ರ: ಪುನರ್ವಸು / ಯೋಗ: ಐಂದ್ರ / ಕರಣ: ತೈತಿಲ

ಸೂರ್ಯೋದಯ : ಬೆ.06.40
ಸೂರ್ಯಾಸ್ತ : 06.02
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30

ರಾಶಿ ಭವಿಷ್ಯ
ಮೇಷ
: ಕೃಷಿಕರಿಗೆ ಆಗಾಗ ಎದುರಾಗುವ ಅಡೆತಡೆಗಳು ನಿವಾರಣೆಯಾಗಲಿವೆ.
ವೃಷಭ: ರಾಜಕೀಯ ವ್ಯಕ್ತಿಗಳು ವಿವಾದಾತ್ಮಕ ಹೇಳಿಕೆಯಿಂದಾಗಿ ಸಂಕಷ್ಟಕ್ಕೆ ಸಿಲುಕಬಹುದು.
ಮಿಥುನ: ಮಡದಿಯೊಂದಿಗೆ ಸಂಸಾರಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚೆ ನಡೆಸುವಿರಿ.

ಕಟಕ: ಮಗನ ಆರೋಗ್ಯದಲ್ಲಿ ಉಂಟಾಗುವ ವ್ಯತ್ಯಾಸದಿಂದಾಗಿ ಜವಾಬ್ದಾರಿ ಹೆಚ್ಚಾಗಲಿದೆ.
ಸಿಂಹ: ಉತ್ತಮ ಅವಕಾಶಗಳು ಸಿಗುವುದರಿಂದ ಆತ್ಮಗೌರವ ಹೆಚ್ಚಾಗಲಿದೆ.
ಕನ್ಯಾ: ಸ್ನೇಹಿತರ ಸಲಹೆ ಅಥವಾ ಸ್ವಾರ್ಥದ ಮನೋಭಾವದಿಂದ ಬರುವ ದುರಾಲೋಚನೆಯು ನಿಮ್ಮ ದಾರಿ ತಪ್ಪಿಸಬಹುದು.

ತುಲಾ: ಕಟ್ಟಡ ನಿರ್ಮಾಣಗಾರರಿಗೆ ಹೆಚ್ಚಿನ ಕೆಲಸ ಇರುವುದು. ಕಲಾವಿದರಿಗೆ ಒಳ್ಳೆಯ ಅವಕಾಶಗಳು ದೊರೆಯುತ್ತವೆ.
ವೃಶ್ಚಿಕ: ಕಾನೂನಿಗೆ ಸಂಬಂಧಿಸಿದ ಕೆಲಸದಲ್ಲಿ ಜಯ ಸಿಗಲಿದೆ. ಕಲಾವಿದರಿಗೆ ಒಳ್ಳೆಯ ದಿನ.
ಧನುಸ್ಸು: ಪೊಲೀಸ್ ಅಧಿಕಾರಿಗಳ ಜವಾಬ್ದಾರಿ ಕಡಿಮೆ ಯಾಗಲಿದೆ. ಅನೇಕ ಅಡೆತಡೆಗಳು ದೂರವಾಗಲಿವೆ.

ಮಕರ: ಉದ್ಯೋಗ ಸ್ಥಳದಲ್ಲಿ ಸಣ್ಣಪುಟ್ಟ ಸಮಸ್ಯೆ ಯಿಂದಾಗಿ ಹಿತಶತ್ರುಗಳ ಬಗ್ಗೆ ಮಾಹಿತಿ ಸಿಗಲಿದೆ.
ಕುಂಭ: ಹಿರಿಯ ಅಧಿಕಾರಿಗಳ ಆಕಸ್ಮಿಕ ಭೇಟಿಯಿಂದಾಗಿ ಉದ್ಯೋಗ ಪ್ರಾಪ್ತಿಯಾಗಲಿದೆ.
ಮೀನ: ಸರ್ಕಾರಿ ನೌಕರರಿಗೆ ಉನ್ನತ ಸ್ಥಾನಮಾನ ಸಿಗುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.

RELATED ARTICLES

Latest News