Friday, November 22, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(02-06-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(02-06-2024)

ನಿತ್ಯ ನೀತಿ : ಅನುಮಾನ ತಪ್ಪಾಗಬಹುದು. ಆದರೆ, ಅನುಭವ ಎಂದಿಗೂ ತಪ್ಪಾಗಲ್ಲ. ಅನುಮಾನ ಕೇವಲ ನಮ ಮನಸ್ಸಿನ ಕಲ್ಪನೆ. ಅನುಭವ ಜೀವನದಲ್ಲಿ ನಾವು ಕಲಿತ ಪಾಠ.

ಪಂಚಾಂಗ : 02-06-2024, ಭಾನುವಾರ
ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಕೃಷ್ಣ ಪಕ್ಷ
ತಿಥಿ: ಏಕಾದಶಿ / ನಕ್ಷತ್ರ: ರೇವತಿ / ಯೋಗ: ಆಯುಷ್ಮಾನ್‌ / ಕರಣ: ಭವ
ಸೂರ್ಯೋದಯ : ಬೆ.05.52
ಸೂರ್ಯಾಸ್ತ : 06.43
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ರಾಶಿಭವಿಷ್ಯ :
ಮೇಷ
: ಸ್ನೇಹಿತರು ಮತ್ತು ಪರಿಚಯಸ್ಥರೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತೀರಿ.
ವೃಷಭ: ದಾಂಪತ್ಯ ಕಲಹ ಅಂತ್ಯಗೊಳ್ಳಲಿದೆ. ಹೂಡಿಕೆಯಲ್ಲಿ ಲಾಭ ಗಳಿಸುವುವಿರಿ.
ಮಿಥುನ: ಮಹಿಳೆಯರಿಗೆ ಮೇಲಧಿಕಾರಿಗಳಿಂದ ಕಿರುಕುಳ. ಏಲಕ್ಕಿ ವ್ಯಾಪಾರಿ ಗಳಿಗೆ ಅಲ್ಪ ಲಾಭ.

ಕಟಕ: ಯೋಜಿತ ರೀತಿಯಲ್ಲಿ ಹೋದರೆ ಸಮಸ್ಯೆಗಳು ನಿವಾರಣೆಯಾಗುವುದರಲ್ಲಿ ಸಂದೇಹವಿಲ್ಲ.
ಸಿಂಹ: ಅನಗತ್ಯ ಮಾತು ಗಳನ್ನು ನಿಯಂತ್ರಿಸುವುದು ಬಹಳ ಒಳಿತು.
ಕನ್ಯಾ: ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಸಾಕಷ್ಟು ಸಮಯ ಕಳೆಯಲು ಬಯಸುವಿರಿ.

ತುಲಾ: ಅನಾರೋಗ್ಯ ಕಾರಣದಿಂದಾಗಿ ಮನಸ್ಸಿಗೆ ಕಿರಿಕಿರಿ ಉಂಟಾಗಲಿದೆ. ದೂರ ಪ್ರಯಾಣ ಮಾಡುವಿರಿ.
ವೃಶ್ಚಿಕ: ಯಶಸ್ಸು ಸಾಧಿಸಲು ಯಾವುದೇ ಅಪಾಯವನ್ನಾದರೂ ಎದುರಿಸಲು ಸಿದ್ಧರಾಗಿರುತ್ತೀರಿ.
ಧನುಸ್ಸು: ವಿರೋಧಿಗಳಿಂದ ಕೆಲಸಕ್ಕೆ ಅಡೆತಡೆ.

ಮಕರ: ವೈದ್ಯವೃತ್ತಿಯಲ್ಲಿರುವವರು ಅಧಿಕ ಶ್ರಮ ಪಡುವುದರಿಂದ ಆಯಾಸ ಉಂಟಾಗಲಿದೆ.
ಕುಂಭ: ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ. ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು.
ಮೀನ: ಸ್ವಯಂಕೃತ ಅಪರಾಧಗಳಿಂದ ನಷ್ಟ ಅನುಭವಿಸುವಿರಿ. ಸಾಲದ ಚಿಂತೆ ಕಾಡಲಿದೆ.

RELATED ARTICLES

Latest News