ನಿತ್ಯ ನೀತಿ : ಸಹವಾಸಕ್ಕೆ ಬಿದ್ದು ಕೆಟ್ಟ ಎಂಬ ಮಾತಿರುವಂತೆಯೇ ಸಹವಾಸದಿಂದಾಗಿ ಸರಿ ಹೋದ ಎಂಬ ಮಾತೂ ಇದೆ. ನಾವದನ್ನು ಗುರುತಿಸುವುದಿಲ್ಲ ಅಷ್ಟೇ.
ಪಂಚಾಂಗ : ಶನಿವಾರ, 02-08-2025
ವಿಶ್ವಾವಸುನಾಮ ಸಂವತ್ಸರ / ದಕ್ಷಿಣಾಯನ / ಸೌರ ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ವಿಶಾಖಾ / ಯೋಗ: ಶುಕ್ಲ / ಕರಣ: ಬಾಲವ
ಸೂರ್ಯೋದಯ – ಬೆ.06.05
ಸೂರ್ಯಾಸ್ತ – 06.46
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.00-7.30
ರಾಶಿಭವಿಷ್ಯ :
ಮೇಷ: ಇನ್ನೊಬ್ಬರ ಮಾತುಗಳನ್ನು ಆಲಿಸಿ ತೀರ್ಮಾನಕ್ಕೆ ಬರುವುದು ಅನಿರ್ವಾಯವಾಗಲಿದೆ.
ವೃಷಭ: ಸ್ವಂತ ಉದ್ಯೋಗ ಮಾಡುವವರಿಗೆ ಲಾಭ ಹೆಚ್ಚುತ್ತದೆ. ಆತ್ಮಗೌರವಕ್ಕೆ ಹೆಚ್ಚು ಬೆಲೆ ಕೊಡುವಿರಿ.
ಮಿಥುನ: ಹಿರಿಯ ವಿದ್ವಾಂಸರಿಗೆ ಗೌರವ ಸಿಗುತ್ತದೆ. ನಿರೀಕ್ಷಿತ ಮಟ್ಟಕ್ಕಿಂತ ಆದಾಯ ಹೆಚ್ಚಿರುತ್ತದೆ.
ಕಟಕ: ಹಿರಿಯ ನಾಗರಿಕರಿಗೆ ಸರ್ಕಾರಿ ನೆರವು. ಮಕ್ಕಳ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ಸಿಂಹ: ಮಕ್ಕಳಿಂದ ನೆಮ್ಮದಿ ಸಿಗಲಿದೆ. ವ್ಯಾಪಾರ- ವ್ಯವಹಾರದಲ್ಲಿ ಲಾಭ.
ಕನ್ಯಾ: ಸೋದರನ ಆಗಮನ ದಿಂದ ಮನೆಯಲ್ಲಿ ಹೆಚ್ಚಿನ ಸಂಭ್ರಮ ಮೂಡಲಿದೆ.
ತುಲಾ: ಸೌಜನ್ಯದಿಂದ ನಡೆದು ಕೊಳ್ಳುವುದರಿಂದ ನೆರೆಹೊರೆ ಯವರು ನಿಮ್ಮ ಕಷ್ಟಗಳಿಗೆ ಸ್ಪಂದಿಸುವರು. ಭಜನೆಯಿಂದ ನೆಮ್ಮದಿ ಸಿಗಲಿದೆ.
ವೃಶ್ಚಿಕ: ಮಕ್ಕಳಿಂದ ಶುಭವಾರ್ತೆ ಕೇಳುವಿರಿ.ಹೊಸ ಹೊಸ ಅವಕಾಶಗಳು ಒದಗಿ ಬರಲಿವೆ.
ಧನುಸ್ಸು: ಇತರರೊಂದಿಗೆ ಸೇರಿ ಮಾಡುವ ಕೆಲಸ- ಕಾರ್ಯಗಳಲ್ಲಿ ಉತ್ತಮ ಲಾಭ ದೊರೆಯಲಿದೆ.
ಮಕರ: ದೂರ ಪ್ರಯಾಣವನ್ನು ಸಾಧ್ಯವಾದಷ್ಟು ಮುಂದೂಡುವುದು ಉತ್ತಮ.
ಕುಂಭ: ಹಣಕಾಸಿನ ವ್ಯತ್ಯಾಸಗಳಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಲಿದೆ.
ಮೀನ: ನಿಮ್ಮ ಮೇಲಿದ್ದ ಆಪಾದನೆಗಳು ದೂರಾಗಿ ಮೇಲ ಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ.
- ಅಕ್ಕ ಮತ್ತು ತಮ್ಮನನ್ನು ಕೊಂದು ಸುಟ್ಟು ಹಾಕಿದ ಯುವಕ
- ‘ಆಪರೇಷನ್ ಅಖಾಲ್’ ಮೂಲಕ ಮೂವರು ಉಗ್ರರನ್ನು ಹೊಸಕಿಹಾಕಿದ ಸೇನೆ
- ಪತ್ನಿಯೊಂದಿಗೆ ಮಾತನಾಡಿದ ವ್ಯಕ್ತಿಯನ್ನು ಇರಿದುಕೊಂದ ಲಿವ್ ಇನ್ ಪಾರ್ಟನರ್
- ಆ.10 ರಂದು ನಮ್ಮ ಮೆಟ್ರೋದ ಹಳದಿ ಮಾರ್ಗ ಉದ್ಘಾಟಿಸಿ 3ನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಪ್ರಧಾನಿ ಮೋದಿ
- ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ನೇಣಿಗೆ ಶರಣು