ನಿತ್ಯ ನೀತಿ : ಆಗಿಹೋಗಿದ್ದ ಕ್ಷಣಗಳ ಬಗ್ಗೆ ಚಿಂತಿಸಬೇಡಿ ಅದು ಕಂಬನಿ ತರುತ್ತದೆ. ಮುಂದೆ ಆಗುವ ಕ್ಷಣಗಳ ಬಗ್ಗೆ ಚಿಂತಿಸಬೇಡಿ. ಅದು ಗಾಬರಿ ತರುತ್ತದೆ. ಇಂದಿನ ಕ್ಷಣಗಳನ್ನು ಖುಷಿಯಿಂದ ಅನುಭವಿಸಿ. ಅದು ಉಲ್ಲಾಸ ತರುತ್ತದೆ.
ಪಂಚಾಂಗ : ಬುಧವಾರ , 02-10-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ /
ಕೃಷ್ಣ ಪಕ್ಷ / ತಿಥಿ: ಅಮಾವಾಸ್ಯೆ / ನಕ್ಷತ್ರ: ಉತ್ತರಾಭಾದ್ರ / ಯೋಗ: ಬ್ರಹ್ಮ / ಕರಣ: ಚತುಷ್ಪಾದ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.09
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00
ರಾಶಿಭವಿಷ್ಯ :
ಮೇಷ: ಪೊಲೀಸ್ ಅಧಿ ಕಾರಿಗಳ ಜವಾಬ್ದಾರಿ ಕಡಿಮೆ ಯಾಗಲಿದೆ. ಅನೇಕ ಅಡೆತಡೆಗಳು ದೂರವಾಗಲಿವೆ.
ವೃಷಭ: ಅಗತ್ಯವಿರುವ ವಸ್ತುಗಳನ್ನು ಖರೀದಿಸು ವುದು ಒಳಿತು. ಸಿಕ್ಕಾಪಟ್ಟೆ ಖರ್ಚು ಮಾಡದಿರಿ.
ಮಿಥುನ: ಹಿಂದೆ ನೀವು ಮಾಡಿದ್ದ ಕೆಲವು ಪ್ರಯತ್ನಗಳು ಫಲ ಸಿಗುವ ಸಾಧ್ಯತೆಗಳಿವೆ.
ಕಟಕ: ಕಲಾವಿದರಿಗೆ ಒಳ್ಳೆಯ ಅವಕಾಶಗಳು ದೊರೆಯಲಿವೆೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದಿರಿ.
ಸಿಂಹ: ಉನ್ನತ ಅಧಿ ಕಾರಿ ಭೇಟಿಗಾಗಿ ದಿನವಿಡೀ ಓಡಾಡಬೇಕಾದ ಪರಿಸ್ಥಿತಿ ಎದುರಾಗಲಿದೆ.
ಕನ್ಯಾ: ಬ್ಯಾಂಕ್ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿರುವುದು.
ತುಲಾ: ಯಾರದ್ದೋ ಮಾತು ಕೇಳಿ ನಿಮ್ಮ ಅಮೂಲ್ಯ ಸಮಯ ಹಾಳುಮಾಡಿಕೊಳ್ಳದಿರಿ.
ವೃಶ್ಚಿಕ: ನಿಮ್ಮ ವರ್ಚಸ್ಸಿನ ಪ್ರಭಾವದಿಂದ ವಿನೂತನ ಅವಕಾಶಗಳು ದೊರೆಯಲಿವೆ.
ಧನುಸ್ಸು: ನಕಾರಾತ್ಮಕವಾಗಿ ಮಾತನಾಡುವ ಜನರಿಂದ ದೂರವಿರುವುದು ಬಹಳ ಒಳ್ಳೆಯದು.
ಮಕರ: ಮಕ್ಕಳಿಂದ ಸಂತೋಷ ಉಂಟಾಗುವುದು. ಆರೋಗ್ಯದ ಕಡೆ ಗಮನ ಹರಿಸಿ.
ಕುಂಭ: ಶತ್ರುಗಳನ್ನು ಜಯಿಸುವಿರಿ. ನಿಮ್ಮ ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಲಿದೆ.
ಮೀನ: ಆಹಾರ ವ್ಯತ್ಯಾಸದಿಂದ ಪಿತ್ತ ಸಂಬಂಧಿ ಅನಾರೋಗ್ಯ ಕಾಡಬಹುದು.