Thursday, December 5, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-12-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-12-2024)

Today's Horoscope

ನಿತ್ಯ ನೀತಿ : ಪಾಠವನ್ನು ಕಲಿಸಿ ಪರೀಕ್ಷೆ ಇಡುವುದು ವಿದ್ಯೆ. ಪರೀಕ್ಷೆಯನ್ನು ಇಟ್ಟು ಪಾಠ ಕಲಿಸುವುದು ಜೀವನ.

ಪಂಚಾಂಗ : ಮಂಗಳವಾರ, 03-12-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ದ್ವಿತೀಯಾ / ನಕ್ಷತ್ರ: ಮೂಲಾ / ಯೋಗ: ಶೂಲ / ಕರಣ: ತೈತಿಲ

ಸೂರ್ಯೋದಯ – ಬೆ.06.22
ಸೂರ್ಯಾಸ್ತ – 05.52
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30

ರಾಶಿಭವಿಷ್ಯ :
ಮೇಷ: ವ್ಯಾಪಾರಿಗಳು ತಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಉತ್ತಮ ಫಲ ಪಡೆಯುವರು.
ವೃಷಭ: ಉದ್ಯೋಗಾಕಾಂಕ್ಷಿಗಳಿಗೆ ಬಹಳ ಮಹತ್ವದ ದಿನವಾಗಿದೆ. ಯಶಸ್ಸು ಸಿಗಲಿದೆ.
ಮಿಥುನ: ಕೆಲ ಜನರು ನಿಮ್ಮನ್ನು ನೋಡಿ ಅಸೂಯೆ ಪಡೆಯಬಹುದು. ಖರ್ಚು ಹೆಚ್ಚಾಗುವ ಸಂಭವವಿದೆ.

ಕಟಕ: ಕೆಲಸದಲ್ಲಿ ಬಡ್ತಿ ಸಿಗಬಹುದು ಹಾಗೂ ಪ್ರಗತಿ ಪಥದೆಡೆಗೆ ಜೀವನ ಸಾಗಬಹುದು.
ಸಿಂಹ: ಕಾನೂನು ತೊಂದರೆ ತಪ್ಪಿಸಲು ಪ್ರಯತ್ನಿಸಿ. ಮಾನಸಿಕ ಒತ್ತಡ ಸ್ವಲ್ಪ ಹೆಚ್ಚಾಗಲಿದೆ.
ಕನ್ಯಾ: ನಿಮ್ಮ ಪ್ರೀತಿಯ ಸಂಗಾತಿಯ ಸಹಕಾರದಿಂದ ಹೊರಗಿನ ಕೆಲಸದಲ್ಲಿ ಉತ್ತಮ ಸಾಧನೆ ಮಾಡುವಿರಿ.

ತುಲಾ: ಯಾರ ಬಗ್ಗೆಯೂ ಹಗುರವಾಗಿ ಮಾತನಾಡ ಬೇಡಿ. ನಿಮಗೆ ಬರಬೇಕಾದ ಹಳೇ ಬಾಕಿ ಇದ್ದಲ್ಲಿ ಬರುವ ಸಾಧ್ಯತೆಗಳು ಹೆಚ್ಚಾಗಿವೆ.
ವೃಶ್ಚಿಕ: ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರ ವಾದ ದಿನವಾಗಿದೆ. ಧೈರ್ಯ ಹೆಚ್ಚಾಗಿರುತ್ತದೆ.
ಧನುಸ್ಸು: ಪಿತ್ರಾರ್ಜಿತ ಆಸ್ತಿ ವ್ಯಾಜ್ಯ ಬಗೆಹರಿಯ ಲಿದೆ. ಹಣಕಾಸು ವಿಚಾರದಲ್ಲಿ ಪಾರದರ್ಶಕವಾಗಿರಿ.

ಮಕರ: ಮಹಿಳೆಯರು ಸಂಸಾರದ ಗುಟ್ಟನ್ನು ಹೊಸಬರ ಜತೆಗೆ ಹಂಚಿಕೊಳ್ಳದಿರಿ.
ಕುಂಭ: ಯಾವುದಾದರೂ ಒಂದು ವಿಚಾರವಾಗಿ ಚಿಂತೆ ನಿಮ್ಮನ್ನು ಕಾಡುತ್ತಲೇ ಇರುತ್ತದೆ.
ಮೀನ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹಲವು ಮೂಲಗಳಿಂದ ಅನುಕೂಲ ಒದಗಿಬರಲಿವೆ.

RELATED ARTICLES

Latest News