ನಿತ್ಯ ನೀತಿ : ಮಾತು, ಮನಸ್ಸು ಮತ್ತು ನಡೆಗಳು ಮನುಷ್ಯನನ್ನು ಸಜ್ಜನನ್ನಾಗಿಸುತ್ತವೆ. ದಾರಿ ತಪ್ಪಿದರೆ ಅಧಮನನ್ನಾಗಿಸುತ್ತವೆ.
ಪಂಚಾಂಗ : 05-11-2025, ಬುಧವಾರ
ಶೋಭಕೃತ್ನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು:ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ಹುಣ್ಣಿಮೆ / ನಕ್ಷತ್ರ: ಅಶ್ವಿನಿ / ಯೋಗ: ಸಿದ್ಧಿ / ಕರಣ: ಬಾಲವ
ಸೂರ್ಯೋದಯ – ಬೆ.06.15
ಸೂರ್ಯಾಸ್ತ – 5.52
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00
ರಾಶಿಭವಿಷ್ಯ :
ಮೇಷ: ಸಮೀಪ ವರ್ತಿಗಳಿಂದ ಮೋಸ ಹೋಗುವ ಸಾಧ್ಯತೆಗಳಿವೆ. ಎಚ್ಚರ ವಹಿಸಿ.
ವೃಷಭ: ವಕೀಲರು ಕೋರ್ಟು -ಕಚೇರಿ ಕೆಲಸಗಳಲ್ಲಿ ಅ ಕ ಲಾಭ ಗಳಿಸುವರು.
ಮಿಥುನ: ಆಸ್ತಿ ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ಆರೋಗ್ಯ ಸಮಸ್ಯೆ ಕಾಡುವುದು.
ಕಟಕ: ಸಹೋದರರ ಆಗಮನದಿಂದ ಮನಸ್ಸಿಗೆ ಸಂತಸವಾಗಲಿದೆ. ದೂರ ಪ್ರಯಾಣ ಮಾಡುವಿರಿ.
ಸಿಂಹ: ರಫ್ತು, ಆಮದು ವ್ಯವಹಾರದಲ್ಲಿ ಉತ್ತಮ ಅವಕಾಶಗಳು ಸಿಗಲಿವೆ.
ಕನ್ಯಾ: ನೀವು ಮಾಡುವ ಕೆಲಸ -ಕಾರ್ಯಗಳಿಂದ ಗೌರವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿ.
ತುಲಾ: ಮಧ್ಯವರ್ತಿಗಳ ಸಹಾಯದಿಂದಾಗಿ ವಿವಾಹದ ವಿಷಯದಲ್ಲಿ ಅನುಕೂಲವಾಗಲಿದೆ.
ವೃಶ್ಚಿಕ: ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಾಗಲಿವೆ.
ಧನುಸ್ಸು: ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡು ವವರಿಗೆ ಉತ್ತಮ ಯಶಸ್ಸು ಸಿಗಲಿದೆ.
ಮಕರ: ಕಾರ್ಯ ನಿಮಿತ್ತ ದೂರ ಪ್ರಯಾಣ ಮಾಡ ಬೇಕಾಗಬಹುದು. ಪಾಲುದಾರಿಕೆಯಲ್ಲಿ ನಷ್ಟ.
ಕುಂಭ: ಶುಭ ಸಮಾರಂಭಗಳು ನಡೆಯುವುದರಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.
ಮೀನ: ನಿಮ್ಮ ನೆಚ್ಚಿನ ಕಾರ್ಯಯೋಜನೆಗಳು ಕೈಗೂಡಲಿವೆ. ಸಂಭ್ರಮದ ದಿನ.
