ನಿತ್ಯ ನೀತಿ : ದೇವರು ಎಂಬುದು ಕಣ್ಣಿಗೆ ಕಾಣದ ಒಂದು ಶಕ್ತಿ. ಅದು ಕರೆದರೆ ಬರುವುದಿಲ್ಲ.. ಅದು ಇರುವ ಕಡೆ ಮನುಷ್ಯ ಹೋಗಲು ಸಾಧ್ಯವಿಲ್ಲ… ನಾವು ಮಾಡುವ ಕೆಲಸದಲ್ಲಿ, ಆಡುವ ಮಾತಿನಲ್ಲಿ, ಬದುಕುವ ರೀತಿಯಲ್ಲಿ ದೇವರನ್ನು ಕಾಣಬೇಕು.
ಪಂಚಾಂಗ : ಶುಕ್ರವಾರ , 06-12-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಶ್ರವಣ / ಯೋಗ: ಧ್ರುವ / ಕರಣ: ಕೌಲವ
ಸೂರ್ಯೋದಯ – ಬೆ.06.29
ಸೂರ್ಯಾಸ್ತ – 05.53
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ಹೊಸ ಕೆಲಸ ಆರಂಭಿಸಲು ಇಂದು ಬಹಳ ಉತ್ತಮ ದಿನವಾಗಿದೆ.
ವೃಷಭ: ಅಂದುಕೊಂಡಿದ್ದ ಕೆಲಸಗಳು ಉತ್ತಮ ವಾಗಿ ನೆರವೇರುವುದರಿಂದ ನೆಮ್ಮದಿ ಇರುವುದು.
ಮಿಥುನ: ನೀವು ಹಿಂದೆ ಮಾಡಿದ ಕೆಲಸ-ಕಾರ್ಯ ಗಳಿಗೆ ತಕ್ಕ ಪ್ರತಿಫಲ ದೊರೆಯಲಿದೆ.
ಕಟಕ: ಉನ್ನತ ಅಧಿ ಕಾರಿಗಳಿಗೆ ವಿಧೇಯತೆಯಿಂದ ಇರುವ ನಿಮ್ಮ ಗುಣ ಇಷ್ಟವಾಗಲಿದೆ.
ಸಿಂಹ: ಸಂದಿಗ್ಧ ಪರಿಸ್ಥಿತಿ ಯನ್ನು ಧೈರ್ಯದಿಂದ ಎದುರಿಸಲು ಸಿದ್ಧರಾಗಿ.
ಕನ್ಯಾ: ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರದಲ್ಲಿರುವವರು ಸೋಲು ಒಪ್ಪಿಕೊಳ್ಳುವ ಮನಸ್ಥಿತಿ ರೂಢಿಸಿಕೊಳ್ಳಿ.
ತುಲಾ: ವಿದೇಶ ವ್ಯವಹಾರಗಳಿಂದ ಹೆಚ್ಚಿನ ಲಾಭ ಗಳಿಸುವಿರಿ.
ವೃಶ್ಚಿಕ: ವೃತ್ತಿಯಲ್ಲಿ ನಿಮ್ಮ ಅನುಭವ ಹಾಗೂ ಪರಿಶ್ರಮಕ್ಕೆ ಸೂಕ್ತ ಸ್ಥಾನಮಾನ ಸಿಗಲಿದೆ.
ಧನುಸ್ಸು: ಹಿರಿಯರೊಂದಿಗೆ ಚರ್ಚೆ ನಡೆಸುವಿರಿ.
ಮಕರ: ಪ್ರತಿಯೊಂದು ಕೆಲಸವನ್ನು ಎಚ್ಚರಿಕೆ ಮತ್ತು ಪ್ರಾಮಾಣಿಕವಾಗಿ ಮಾಡುವುದು ಸೂಕ್ತ
ಕುಂಭ: ಹೊಸ ಕೆಲಸ ಆರಂಭಿಸಲು ಕುಟುಂಬ ದವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ..
ಮೀನ: ಕುಟುಂಬದ ಕಡೆ ಗಮನ ಹರಿಸಿ.