Thursday, September 19, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-08-2027)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-08-2027)

ನಿತ್ಯ ನೀತಿ : ಹೆತ್ತವರ ಮನಸ್ಸನ್ನು ನೋಯಿಸಿ ಗೆದ್ದವರು ಇತಿಹಾಸದಲ್ಲಿಯೇ ಇಲ್ಲ. ತಾಯಿಯನ್ನು ಪೂಜಿಸಿ ಸೋತವರು ಚರಿತ್ರೆಯಲ್ಲಿಯೇ ಇಲ್ಲ.

ಪಂಚಾಂಗ : ಗುರುವಾರ , 08-08-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ಥಿ/ ನಕ್ಷತ್ರ: ಉತ್ತರಾಭಾದ್ರ / ಯೋಗ: ಶಿವ /ಕರಣ: ವಣಿಜ್

ಸೂರ್ಯೋದಯ – ಬೆ.06.07
ಸೂರ್ಯಾಸ್ತ – 06.44
ರಾಹುಕಾಲ – 1.30-3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00-10.30

ರಾಶಿಭವಿಷ್ಯ :
ಮೇಷ
: ಅನಗತ್ಯ ಹಣ ವ್ಯಯ ಮಾಡದಿರಿ.
ವೃಷಭ: ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಅನವಶ್ಯಕ ಖರ್ಚು ನಿಯಂತ್ರಿಸುವುದು ಒಳಿತು.
ಮಿಥುನ: ಉನ್ನತ ಅಧಿ ಕಾರ ದೊರೆಯಲಿದೆ. ಮಾತಿನಿಂದ ಸಮಸ್ಯೆಗೆ ಸಿಲುಕುವಿರಿ. ಎಚ್ಚರದಿಂದಿರಿ.

ಕಟಕ: ಗುತ್ತಿಗೆ ಆಧಾರಿತ ಉದ್ಯೋಗ ನಡೆಸುವವ ರಿಗೆ ಜನಬಲದ ಸಮಸ್ಯೆ ಎದುರಾಗಬಹುದು.
ಸಿಂಹ: ವಿದ್ಯಾರ್ಥಿಗಳಿಗೆ ವಿದ್ಯೆಯ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ಕನ್ಯಾ: ರಿಯಲ್‌ ಎಸ್ಟೇಟ್‌ ವ್ಯವಹಾರ ನಿರಾತಂಕವಾಗಿ ಮುಂದುವರಿಯಲಿದೆ.

ತುಲಾ: ಸಂಪನ್ಮೂಲ ವೃದ್ಧಿ ಗಾಗಿ ಹೊಸ ಮಾರ್ಗ ಕಂಡು ಕೊಳ್ಳುವಲ್ಲಿ ಯಶಸ್ಸು ಸಿಗಲಿದೆ.
ವೃಶ್ಚಿಕ: ಎಲ್ಲ ಕೆಲಸ-ಕಾರ್ಯ ಗಳಿಗೂ ವಿರಾಮ ಹೇಳಿ ಪತ್ನಿ-ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಿರಿ. ಶಿಕ್ಷಣ ವೃತ್ತಿಯವರಿಗೆ ಸನ್ಮಾನ.
ಧನುಸ್ಸು: ಸರ್ಕಾರಿ ನೌಕರರಿಗೆ ಕೆಲಸದ ಒತ್ತಡ. ಮನೋವೈದ್ಯರಿಗೆ ಉತ್ತಮ ದಿನ.

ಮಕರ: ನಾನಾ ರೀತಿಯ ತೊಂದರೆ ಎದುರಿಸ ಬೇಕಾಗುತ್ತದೆ. ಕೋಪ ನಿಯಂತ್ರಿಸಿದರೆ ಒಳಿತು.
ಕುಂಭ: ಹೆಚ್ಚು ಶ್ರಮ ವಹಿಸಿದರೆ ಆದಾಯ ಹೆಚ್ಚಾಗ ಲಿದೆ. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆಯಾಗಲಿದೆ.
ಮೀನ: ದೂರ ಪ್ರಯಾಣ ಮಾಡಬೇಕಾಗಬಹುದು. ಯುವಕರಿಗೆ ವೃತ್ತಿಯಲ್ಲಿ ಹಿನ್ನಡೆಯಾಗಲಿದೆ.

RELATED ARTICLES

Latest News