Monday, June 9, 2025
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-06-2025)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-06-2025)

Today's Horoscope

ನಿತ್ಯ ನೀತಿ : ಗೋಡೆಗಳಲ್ಲಿ ಬಿರುಕು ಬಿಟ್ಟರೆ ಗೋಡೆಗಳು ಬಿದ್ದುಬಿಡುತ್ತವೆ. ಸಂಬಂಧಗಳಲ್ಲಿ ಬಿರುಕು ಬಿಟ್ಟರೆ ಗೋಡೆಗಳು ಹುಟ್ಟಿಕೊಳ್ಳುತ್ತವೆ.

ಪಂಚಾಂಗ : ಸೋಮವಾರ, 09-06-2025
ವಿಶ್ವಾವಸುನಾಮ ಸಂವತ್ಸರ / ಉತ್ತರಾಯಣ / ಸೌರ ಗ್ರೀಷ ಋತು / ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ವಿಶಾಖಾ / ಯೋಗ: ಶಿವ / ಕರಣ: ಗರಜೆ / ಸೂರ್ಯೋದಯ – ಬೆ.05.53
ಸೂರ್ಯಾಸ್ತ – 06.45
ರಾಹುಕಾಲ – 7.30-9.00
ಯಮಗಂಡ ಕಾಲ – 10.30-12.00
ಗುಳಿಕ ಕಾಲ – 1.30-3.00

ರಾಶಿಭವಿಷ್ಯ :
ಮೇಷ: ಆತ್ಮಗೌರವ ಹೆಚ್ಚಾಗಲಿದೆ.
ವೃಷಭ: ಹಿಂಜರಿಕೆ ಮತ್ತು ಭಯದ ಸ್ವಭಾವದಿಂದ ಕಾರ್ಯಕ್ಷೇತ್ರದಲ್ಲಿ ಹಿನ್ನಡೆಗೆ ಕಾರಣವಾಗಲಿದೆ.
ಮಿಥುನ: ವಿದ್ಯಾರ್ಥಿಗಳಿಗೆ ವಿದ್ಯೆಯ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.

ಕಟಕ: ಆರೋಗ್ಯದ ವಿಚಾರದಲ್ಲಿ ಕಾಳಜಿ ವಹಿಸಿ.
ಸಿಂಹ: ಒಂದೇ ಸಮಯಕ್ಕೆ ನಾನಾ ಬಗೆಯ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.
ಕನ್ಯಾ: ಕಚೇರಿಯಲ್ಲಿ ಆತ್ಮ ವಿಶ್ವಾಸದಿಂದ ಕೆಲಸ ಮಾಡಿ.

ತುಲಾ: ಮಕ್ಕಳ ವಿಷಯ ದಲ್ಲಿ ಹೆಚ್ಚು ಕಾಳಜಿ ವಹಿಸಿ.
ವೃಶ್ಚಿಕ: ತಂದೆ-ತಾಯಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಮಾಡುವ ಅವಕಾಶ ದೊರೆಯಲಿದೆ.
ಧನುಸ್ಸು: ನಿಮ್ಮ ಮೇಲೆ ಮೇಲ ಕಾರಿಗಳಿಗೆ ಹೆಚ್ಚು ಭರವಸೆ ಮೂಡಲಿದೆ.

ಮಕರ: ಕಷ್ಟದ ಪರಿಸ್ಥಿತಿಯಲ್ಲಿ ಜನಬಲದ ಕೊರತೆಯಾದರೂ ಸ್ನೇಹಿತರ ಸಹಕಾರ ಸಿಗಲಿದೆ.
ಕುಂಭ: ದಾಂಪತ್ಯ ಜೀವನ ಸುಖಮಯವಾಗಿರಲಿದೆ.
ಮೀನ: ಆಸ್ತಿ ನೋಂದಣಿಯಲ್ಲಿ ಗೊಂದಲವಾಗಲಿದೆ.

RELATED ARTICLES

Latest News