ನಿತ್ಯ ನೀತಿ : ವಾಚ್ ನಡೀತಾ ಇದ್ರೆ ಜನ ಟೈಮ್ ಕೇಳ್ಕೊಂಡ್ ಹೋಗ್ತಾರೆ ಟೈಮ್ ನಡೀತಾ ಇದ್ರೆ ಜನ ಹೇಳಿದ್ ಕೇಳ್ಕೊಂಡ್ ಹೋಗ್ತಾರೆ.
ಪಂಚಾಂಗ : ಮಂಗಳವಾರ, 09-09-2025
ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು: ಸೌರ ಶರದ / ಮಾಸ:ಭಾದ್ರಪದ / ಪಕ್ಷ:ಕೃಷ್ಣ / ತಿಥಿ:ದ್ವಿತೀಯಾ / ನಕ್ಷತ್ರ:ಉಭಾ / ಯೋಗ: ಗಂಡ / ಕರಣ: ತೈತಿಲ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.25
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ -12.00-1.30
ರಾಶಿಭವಿಷ್ಯ :
ಮೇಷ: ನೀವು ಮಾಡುವ ಕೆಲಸ-ಕಾರ್ಯಗಳಿಗೆ ಜೀವನ ಸಂಗಾತಿಯ ಬೆಂಬಲ ನಿಮಗೆ ಸಿಗುತ್ತದೆ.
ವೃಷಭ: ಹಳೆ ಸ್ನೇಹಿತರೊಂದಿಗೆ ಮಾತನಾಡುವ ಮೂಲಕ ನಿಮ್ಮ ವಿಷಯಗಳನ್ನು ಹಂಚಿಕೊಳ್ಳಬಹುದು.
ಮಿಥುನ: ಮನೆಯ ಸದಸ್ಯರು ನಿಮ್ಮನ್ನು ನೋಯಿಸಿ ದ್ದರೆ, ಅವರು ನಿಮ್ಮ ಬಳಿ ಬಂದು ಕ್ಷಮೆ ಕೇಳುವರು.
ಕಟಕ: ಸಾಲದ ವ್ಯವಹಾರ ಮಾಡುವುದನ್ನು ತಪ್ಪಿಸಿ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವಿರಿ.
ಸಿಂಹ: ಮಾನಸಿಕ ಒತ್ತಡ ಹೆಚ್ಚಾಗಬಹುದು. ಯೋಗ ಮಾಡುವುದರಿಂದ ಪ್ರಯೋಜನವಾಗುತ್ತದೆ.
ಕನ್ಯಾ: ಆಹಾರದ ಬಗ್ಗೆ ಗಮನ ಕೊಡುವುದು ಒಳಿತು. ಇಲ್ಲದಿದ್ದರೆ ನಿಮ್ಮ ಆರೋಗ್ಯ ಹದಗೆಡಬಹುದು. ಎಚ್ಚರಿಕೆ ವಹಿಸಿ.
ತುಲಾ: ಕೆಲಸಕ್ಕೆ ಸಂಬಂ ಸಿದಂತೆ ಹಿರಿಯರಿಂದ ಕೆಲವು ಉತ್ತಮ ಸಲಹೆಗಳನ್ನು ಪಡೆಯಬಹುದು.
ವೃಶ್ಚಿಕ: ಗುರಿ ತಲುಪುವಲ್ಲಿ ನಿಮ್ಮ ಶ್ರಮ ಸಾರ್ಥಕವೆನಿಸಲಿದೆ. ಲಕ್ಷ್ಮೀ ಪೂಜೆ ಮಾಡುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ.
ಧನುಸ್ಸು: ಸಾಮಾಜಿಕ ಜೀವನದಲ್ಲಿ ಆಹ್ಲಾದಕರ ಅನುಭವಗಳಾಗುತ್ತವೆ.
ಮಕರ: ಒಡಹುಟ್ಟಿದವರೊಂದಿಗೆ ಸಮಯ ಕಳೆಯುವ ಅವಕಾಶ ಸಿಗಲಿದೆ ಮತ್ತು ಅವರಿಂದ ಲಾಭವೂ ದೊರೆಯುವುದು.
ಕುಂಭ: ತಂದೆಯೊಂದಿಗೆ ವೈಮನಸ್ಯವಿದ್ದರೆ ಪರಿಹರಿಸಿ ಕೊಳ್ಳಬಹುದು. ಅವರ ಮಾತಿಗೆ ಮನ್ನಣೆ ನೀಡಿ.
ಮೀನ: ಮನೆಯ ಸಾಮಾಗ್ರಿಗಳ ಖರೀದಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು.
