ನಿತ್ಯ ನೀತಿ : ಊಟ ಮಾಡುವ ತಟ್ಟೆ ಚಿನ್ನದ್ದೇ ಆದ್ರೂ ತಿನ್ನೋದು ಅನ್ನಾನೇ. ಕಾರು ಎಷ್ಟೇ ದುಬಾರಿ ಆದ್ರೂ ಓಡಾಡೋದು ನೆಲದ ಮೇಲೆನೇ. ಅಹಂಕಾರ ಎಷ್ಟೇ ಮೇಲೋದ್ರೂ ಕೊನೆಗೆ ಸೇರುವುದು ಮಣ್ಣನ್ನೇ.
ಪಂಚಾಂಗ : ಶುಕ್ರವಾರ , 11-04-2025
ವಿಶ್ವಾವಸು ನಾಮ ಸಂವತ್ಸರ /ಉತ್ತರಾಯಣ / ಸೌರ ವಸಂತ ಋತು / ಚೈತ್ರ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ಧ್ರುವ / ಕರಣ: ಗರಜೆ
ಸೂರ್ಯೋದಯ – ಬೆ.06.10
ಸೂರ್ಯಾಸ್ತ – 06.32
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ಭೋಗವಸ್ತುಗಳ ಖರೀದಿ ಮಾಡುವಿರಿ. ಕುಟುಂಬದೊಂದಿಗೆ ಊರಿಗೆ ಪ್ರಯಾಣಿಸುವಿರಿ.
ವೃಷಭ: ದೀರ್ಘಕಾಲದವರೆಗೆ ಕಾಡುತ್ತಿರುವ ಪ್ರಶ್ನೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಿರಿ.
ಮಿಥುನ: ವೈಯಕ್ತಿಕ ಜೀವನದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮಾನಸಿಕವಾಗಿ ಸದೃಢರಾಗಿರುವಿರಿ.
ಕಟಕ: ಹಿಂದಿನ ಕೆಲಸಗಳನ್ನು ಪೂರ್ಣಗೊಳಿಸಲು ಒತ್ತು ನೀಡಿ. ಸ್ಥಿರತೆ ಮತ್ತು ಸಾಮರ್ಥ್ಯ ಬಲಗೊಳ್ಳುತ್ತದೆ.
ಸಿಂಹ: ಅಪಾಯ ಮೈ ಮೇಲೆ ಹಾಕಿಕೊಳ್ಳುವುದು ಮತ್ತು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡುವುದನ್ನು ತಪ್ಪಿಸಿ.
ಕನ್ಯಾ: ಸಂಗಾತಿಯೊಂದಿಗೆ ಕೆಲವು ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹರಿಸಿಕೊಳ್ಳಿ. ಶಾಂತ ಸ್ವಭಾವದಲ್ಲಿರಿ.
ತುಲಾ: ನಿಮ್ಮ ಪ್ರಯತ್ನಕ್ಕೆ ತಕ್ಕ ಸ್ಥಾನಮಾನ ದೊರೆಯಲಿದೆ. ವ್ಯವಹಾರದಲ್ಲಿ ಲಾಭ.
ವೃಶ್ಚಿಕ: ಯಾವುದೇ ಪ್ರಮುಖ ಕೆಲಸಗಳನ್ನು ಮಾಡುವಾಗ ಹಿರಿಯರ ಮಾರ್ಗದರ್ಶನ, ಸಲಹೆ-ಸೂಚನೆಗಳನ್ನು ಪಡೆಯುವುದು ಸೂಕ್ತ.
ಧನುಸ್ಸು: ಕೆಲವರು ನಿಮ್ಮನ್ನು ಸಾಲದಲ್ಲಿ ಮುಳುಗಿಸಲು ಪ್ರಯತ್ನಿಸುವರಿ. ಜಾಗ್ರತೆಯಿಂದಿರಿ.
ಮಕರ: ದೂರದ ಬಂಧುಗಳ ಆಗಮನದಿಂದ ಮನಸ್ಸಿಗೆ ಸಂತೋಷವಾಗುತ್ತದೆ.
ಕುಂಭ: ದೇವರ ಮೇಲೆ ನಂಬಿಕೆಯಿಟ್ಟು ಕೆಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿ.
ಮೀನ: ವಿದೇಶ ಪ್ರಯಾಣ ಕೈಗೊಳ್ಳುವಿರಿ. ರೇಷ್ಮೆ ಮತ್ತು ಜೇನು ಕೃಷಿಯಲ್ಲಿ ಲಾಭ ದೊರೆಯಲಿದೆ.