ನಿತ್ಯ ನೀತಿ : ಮನುಷ್ಯ ಎಷ್ಟೇ ಬುದ್ಧಿವಂತನಾಗಿದ್ದರೂ ಸಹ ತಾನು ಹುಟ್ಟುವ ಮುನ್ನ ಹೆರುವವರು ಯಾರೆಂಬುದನ್ನು, ಹಾಗೆಯೇ ಸತ್ತ ನಂತರ ಹೊರುವವರು ಯಾರು ಎಂಬುದನ್ನು ಮಾತ್ರ ಅರಿಯಲಾರ..! ಇದೇ ವ್ಯಕ್ತಿ ಜೀವನದ ರಹಸ್ಯ.
ಪಂಚಾಂಗ : ಶನಿವಾರ , 05-10-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಶರದ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಸ್ವಾತಿ / ಯೋಗ: ವಿಷ್ಕಂಭ /ಕರಣ: ತೈತಿಲ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.07
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.00-7.30
ರಾಶಿಭವಿಷ್ಯ :
ಮೇಷ: ರಫ್ತು ಮಾರಾಟದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಎದು ರಾದರೂ ಆದಾಯಕ್ಕೆ ತೊಂದರೆಯಿಲ್ಲ.
ವೃಷಭ: ವ್ಯವಹಾರದಲ್ಲಿನ ಯೋಜನೆ ಹಾಗೂ ಅವುಗಳ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಿ.
ಮಿಥುನ: ಮನಸ್ಸು ಚಂಚಲವಾಗಲಿದೆ. ಆಕಸ್ಮಿಕ ಧನಲಾಭವಾಗಬಹುದು. ಶತ್ರುಗಳ ಕಾಟ ತಪ್ಪಲಿದೆ.
ಕಟಕ: ಸೇವಾ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಾಪಾರ ಮಾಡುವವರು ವಿಶೇಷ ಲಾಭ ಪಡೆಯುವರು.
ಸಿಂಹ: ಮಧ್ಯವರ್ತಿಗಳಿಂದ ಹುಷಾರಾಗಿರಬೇಕು. ಉದ್ಯೋಗಸ್ಥ ಮಹಿಳೆಯರಿಗೆ ಶುಭ ದಿನ.
ಕನ್ಯಾ: ಬಟ್ಟೆ ವ್ಯಾಪಾರಿ ಗಳಿಗೆ ವ್ಯವಹಾರ ಉತ್ತಮವಾಗಿದ್ದು, ಹೆಚ್ಚಿನ ಆದಾಯ ಸಿಗಲಿದೆ.
ತುಲಾ: ವೈದ್ಯರಿಗೆ ವಿಶೇಷ ರೀತಿಯ ಅನುಭವ ಸಿಗಲಿದೆ.
ವೃಶ್ಚಿಕ: ಜಾಗರೂಕತೆಯಿಂದ ಹಣ ಖರ್ಚು ಮಾಡಿ. ವಿವಾದಗಳಿಗೆ ಆಸ್ಪದ ನೀಡದಿರಿ.
ಧನುಸ್ಸು: ಸಮಯ ವ್ಯರ್ಥ ಮಾಡಿಕೊಳ್ಳದಿರಿ. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ.
ಮಕರ: ಬಡ್ತಿ, ವರ್ಗಾವಣೆ, ವೇತನ ಹೆಚ್ಚಳದ ನಿರೀಕ್ಷೆ ಯಲ್ಲಿರುವವರಿಗೆ ಅಂದು ಕೊಂಡಂತೆಯೇ ಆಗಲಿದೆ.
ಕುಂಭ: ವೃತ್ತಿ ಬದಲಾವಣೆ ಮಾಡುವ ಬಗ್ಗೆ ಪತ್ನಿ ಮತ್ತು ಸ್ನೇಹಿತರೊಂದಿಗೆ ಚರ್ಚಿಸಿ ತೀರ್ಮಾನಿಸಿ.
ಮೀನ: ಕುಟುಂಬ ಕಲಹ ಉಂಟಾಗುವ ಸಾಧ್ಯತೆ ಇದೆ. ಅತ್ಯಂತ ಎಚ್ಚರಿಕೆಯಿಂದ ಮಾತನಾಡಿ