Thursday, December 12, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-12-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-12-2024)

Today's Horoscope

ನಿತ್ಯ ನೀತಿ : ದೇವರು ಎಂಬುದು ಕಣ್ಣಿಗೆ ಕಾಣದ ಒಂದು ಶಕ್ತಿ. ಅದು ಕರೆದರೂ ಬರುವುದಿಲ್ಲ… ಅದು ಇರುವ ಕಡೆ ಮನುಷ್ಯ ಹೋಗಲು ಸಾಧ್ಯವಿಲ್ಲ… ನಾವು ಮಾಡುವ ಕೆಲಸದಲ್ಲಿ, ಆಡುವ ಮಾತಿನಲ್ಲಿ, ಬದುಕುವ ರೀತಿಯಲ್ಲಿ ದೇವರನ್ನು ಕಾಣಬೇಕು…

ಪಂಚಾಂಗ : ಬುಧವಾರ, 11-12-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ರೇವತಿ / ಯೋಗ: ವರೀಯಾನ್ / ಕರಣ: ವಣಿಜ್
ಸೂರ್ಯೋದಯ – ಬೆ.06.32
ಸೂರ್ಯಾಸ್ತ – 05.54
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ
: ಅಣ್ಣ-ತಮ್ಮಂದಿರ ಒಳಜಗಳದಿಂದ ಮುಖ್ಯವಾದ ಕಾರ್ಯಕ್ರಮವೊಂದಕ್ಕೆ ತಡೆಯಾಗಲಿದೆ.
ವೃಷಭ: ಕೆಲಸದ ಸ್ಥಳದಲ್ಲಿ ಶ್ರಮ ಪಡುವ ಮನೋಭಾವ ಬೆಳೆಸಿಕೊಳ್ಳುವುದು ಒಳ್ಳೆಯದು.
ಮಿಥುನ: ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ.

ಕಟಕ: ದೇಹದಲ್ಲಿ ರಕ್ತದ ಒತ್ತಡ ಅಥವಾ ಮೂತ್ರ ಸಂಬಂಧಿ ಕಾಯಿಲೆಗಳ ಬಗ್ಗೆ ಜಾಗ್ರತೆ ವಹಿಸಿ.
ಸಿಂಹ: ಅನ್ವೇಷಣೆಯ ಸ್ವಭಾವ ವೃತ್ತಿ ಬದುಕಿಗೆ ಹೊಸ ತಿರುವು ನೀಡಲಿದೆ.
ಕನ್ಯಾ: ಸಂಸ್ಥೆಯ ಆದಾಯ ಹೆಚ್ಚಿಸಿಕೊಳ್ಳಲು ಕಾರ್ಯ ಕ್ರಮಗಳನ್ನು ರೂಪಿಸುವಿರಿ.

ತುಲಾ: ನಿಸ್ವಾರ್ಥ ಮನೋಭಾವದಿಂದ ಮಾಡಿದ ಕೆಲಸಗಳು ಫಲ ನೀಡಲಿವೆ.
ವೃಶ್ಚಿಕ: ವಿಶ್ರಾಂತಿಯಿಲ್ಲದೆ ದುಡಿಯುವ ನಿಮಗೆ ಜನರ ದೃಷಿಯಿಂದಾಗಿ ಸ್ವಲ್ಪ ಮಟ್ಟಿನ ಅನಾರೋಗ್ಯ ಕಾಡಲಿದೆ.
ಧನುಸ್ಸು: ಕಾಗದದ ಆಮದು ಹಾಗೂ ಉದ್ಯಮದಾರರಿಗೆ ಉತ್ತಮ ಆದಾಯವಿರುವುದು.

ಮಕರ: ಕೆಲಸದ ವಿಚಾರದಲ್ಲಿ ಹಿರಿಯರ ಮಾತಿನಂತೆ ನಡೆದುಕೊಳ್ಳುವುದು ಒಳಿತು.
ಕುಂಭ: ಕೌಟುಂಬಿಕ ವಿಚಾರದಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಕೆ ಬೇಡ.
ಮೀನ: ಕಲಾವಿದರಿಗೆ ಉತ್ತವವಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ.

RELATED ARTICLES

Latest News