ನಿತ್ಯ ನೀತಿ :
ಒಂದು ಮಾತು ನೆನಪಿಟ್ಟುಕೊಳ್ಳಿ. ಸುಖದಲ್ಲಿ ಎಲ್ಲರೂ ಸಿಗುತ್ತಾರೆ. ಆದರೆ ಕಷ್ಟದಲ್ಲಿ ಭಗವಂತ ಮಾತ್ರ ಸಿಗುವುದು.
ಪಂಚಾಂಗ : ಗುರುವಾರ, 14-03-2024
ಶೋಭಕೃತ್ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಭರಣಿ / ಯೋಗ: ವೈಧೃತಿ / ಕರಣ: ಭವ
ಸೂರ್ಯೋದಯ : ಬೆ.06.28
ಸೂರ್ಯಾಸ್ತ : 06.30
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30
ಇಂದಿನ ರಾಶಿಭವಿಷ್ಯ
ಮೇಷ: ಕಾರ್ಯ ಸಾಮಥ್ರ್ಯ ಅರ್ಥಮಾಡಿಕೊಂಡು ಆದಾಯ ಹೆಚ್ಚಿಸುವ ಕೆಲಸ ಮಾಡಿ.
ವೃಷಭ: ಪೊಲೀಸ್ ಅಧಿಕಾರಿಗಳ ಜವಾಬ್ದಾರಿ ಕಡಿಮೆಯಾಗಲಿದೆ. ಶಾಂತವಾಗಿರುವುದು ಒಳಿತು.
ಮಿಥುನ: ನಿಮ್ಮ ವರ್ಚಸ್ಸಿನ ಪ್ರಭಾವದಿಂದ ವಿನೂತನ ಅವಕಾಶಗಳು ದೊರೆಯಲಿವೆ.
ಕಟಕ: ಹಿರಿಯರೊಂದಿಗೆ ಮನಸ್ತಾಪ ಉಂಟಾಗಬಹುದು. ಸಹನೆಯಿಂದ ವರ್ತಿಸಿ.
ಸಿಂಹ: ನಿಮ್ಮ ಬಗ್ಗೆ ನಿಮಗೆ ಒಂದು ರೀತಿ ಹೆಮ್ಮೆ ಇರುತ್ತದೆ.
ಕನ್ಯಾ: ವಿದ್ಯಾರ್ಥಿಗಳು ಹೊಸದಾಗಿ ಕೋರ್ಸ್ ಸೇರುವ ಮುನ್ನ ಅಳೆದು, ತೂಗಿ ಮುಂದೆ ಹೆಜ್ಜೆ ಇಡಿ.
ತುಲಾ: ನಿಮ್ಮ ಇಚ್ಛೆಗಳು ಬಹುಪಾಲು ಫಲಿಸುವ ದಿನವಾಗಿದೆ. ವ್ಯವಹಾರದಲ್ಲಿ ಲಾಭ ಸಿಗಲಿದೆ.
ವೃಶ್ಚಿಕ: ಉದ್ಯೋಗ ಬದಲಾವಣೆಗೆ ಮನಸ್ಸು ಮಾಡು ವಿರಿ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.
ಧನುಸ್ಸು: ಎಲ್ಲಾ ವಿಚಾರಗಳನ್ನು ಸಾವಧಾನದಿಂದ ಬಗೆಹರಿಸಿಕೊಳ್ಳುವುದು ಒಳ್ಳೆಯದು.
ಮಕರ: ಹೊಟೇಲ್ ವ್ಯಾಪಾರಿಗಳಿಗೆ ಸಾಧಾರಣ ಲಾಭ. ಆರೋಗ್ಯದಲ್ಲಿ ಏರುಪೇರಾಗಲಿದೆ.
ಕುಂಭ: ಕಷ್ಟದ ಕೆಲಸವನ್ನು ಇಷ್ಟದಿಂದ ಮಾಡಿ. ಮನಸ್ಸು ಸಮಾಧಾನದಿಂದಿರುತ್ತದೆ.
ಮೀನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯಾಗಲಿದೆ. ಶತ್ರುಗಳ ಕಾಟ ಹೆಚ್ಚಾಗಬಹುದು.