ನಿತ್ಯ ನೀತಿ : ಕಳೆದು ಹೋದ ಒಳ್ಳೆಯ ಸಮಯ ಜೀವನದಲ್ಲಿ ನೆನಪಾಗಿ ಉಳಿಯುತ್ತದೆ. ಕಳೆದು ಹೋದ ಕೆಟ್ಟ ಸಮಯ ಬದುಕಿನಲ್ಲಿ ಪಾಠವಾಗುತ್ತದೆ.
ಪಂಚಾಂಗ : ಶುಕ್ರವಾರ, 14-03-2025
ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ಸೌರ ವಸಂತ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ / ತಿಥಿ: ಹುಣ್ಣಿಮೆ / ನಕ್ಷತ್ರ: ಉತ್ತರಾ / ಯೋಗ: ಶೂಲ / ಕರಣ: ಬಾಲವ
ಸೂರ್ಯೋದಯ – ಬೆ.06.29
ಸೂರ್ಯಾಸ್ತ – 06.30
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ಅತಿಥಿಗಳ ಆಗಮನದಿಂದಾಗಿ ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ.
ವೃಷಭ: ತಂದೆಯಿಂದ ನಿಮ್ಮ ವೃತ್ತಿಗೆ ಸಹಾಯ ದೊರೆಯುತ್ತದೆ. ಶತ್ರುಗಳ ಕಾಟ ತಪ್ಪಲಿದೆ.
ಮಿಥುನ: ಪ್ರತಿ ಕೆಲಸವನ್ನೂ ತಾಳ್ಮೆಯಿಂದ ನಿಭಾಯಿಸಿ. ಕಚೇರಿಯಲ್ಲಿ ವಿನಾಕಾರಣ ಕಿರುಕುಳ ಉಂಟಾದೀತು.
ಕಟಕ: ಕಾಗದದ ಆಮದು ಹಾಗೂ ಉದ್ಯಮದಾರರಿಗೆ ಉತ್ತಮ ಆದಾಯವಿರುವುದು.
ಸಿಂಹ: ಒಳ್ಳೆಯ ಜನ ರೊಂದಿಗೆ ಸಂಪರ್ಕ ಹೊಂದುವಿರಿ. ಬುದ್ಧಿವಂತಿಕೆ ಯಿಂದ ಕೆಲಸದಲ್ಲಿ ಯಶಸ್ಸು ಸಾಧಿಸುವಿರಿ.
ಕನ್ಯಾ: ದೂರ ಪ್ರಯಾಣ ಮಾಡುವುದರಿಂದ ಲಾಭ ದಾಯಕವಾಗಿ ರುತ್ತದೆ.
ತುಲಾ: ಬರುವ ಅವಕಾಶ ಸದುಪಯೋಗಪಡಿಸಿ ಕೊಳ್ಳಿ.
ವೃಶ್ಚಿಕ: ಹಿರಿಯರ ಎದುರಾಗ ಬಹುದಾದ ವಿಪತ್ತುಗಳು ದೂರವಾಗಲಿವೆ.
ಧನುಸ್ಸು: ಮಹಿಳೆಯರು ಮೋಸ ಹೋಗ ಬಹುದು. ಎಚ್ಚರಿಕೆಯಿಂದ ವ್ಯವಹರಿಸಿದರೆ ಒಳಿತು.
ಮಕರ: ಉದ್ಯೋಗ ಸ್ಥಳದಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿ.
ಕುಂಭ: ಗುರು-ಹಿರಿಯರೊಂದಿಗೆ ಸಮಾಲೋಚನೆ ನಡೆಸುವಿರಿ. ಸಮಸ್ಯೆಗಳು ಬಗೆಹರಿಯಲಿವೆ.
ಮೀನ: ತಂದೆ-ತಾಯಿಯ ಆರೋಗ್ಯದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.