ನಿತ್ಯ ನೀತಿ : ಮುಂದೊಂದು ದಿನ ನಮ ಜೀವನದಲ್ಲಿ ವಿಶೇಷ ಘಳಿಗೆ ಬರಲಿದೆ ಎಂದು ಯೋಚಿಸುತ್ತಾ ಇರಬಾರದು. ಈಗಿನ ಕ್ಷಣಗಳನ್ನೇ ವಿಶೇಷವನ್ನಾಗಿಸುವುದು ಹೇಗೆ ಎಂದು ಯೋಚಿಸಿ ಕಾರ್ಯಪ್ರವೃತ್ತರಾಗಬೇಕು.
ಪಂಚಾಂಗ : ಶುಕ್ರವಾರ, 14-06-2024
ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಶುಕ್ಲ ಪಕ್ಷ /
ತಿಥಿ: ಅಷ್ಟಮಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ಸಿದ್ಧಿ / ಕರಣ: ವಿಷ್ಟಿ
ಸೂರ್ಯೋದಯ – ಬೆ.05.54
ಸೂರ್ಯಾಸ್ತ – 06.47
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ಕಚೇರಿ ಕೆಲಸವನ್ನು ಮನಃಪೂರ್ವಕವಾಗಿ ಮಾಡಿ. ಅನ್ಯರಿಗೆ ಉಪಕಾರ ಮಾಡುವಿರಿ.
ವೃಷಭ: ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುವ ನೀವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.
ಮಿಥುನ: ಬಂಧುಗಳನ್ನು ವಿನಾಕಾರಣ ದ್ವೇಷಿಸುವಿರಿ.
ಕಟಕ: ಶತ್ರುಗಳನ್ನು ಜಯಿಸುವಿರಿ. ನಿಮ್ಮ ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಲಿದೆ.
ಸಿಂಹ: ಶ್ರಮ ಹೆಚ್ಚಿದ್ದರೂ ದುಡಿಮೆ ಲಾಭದಾಯಕ ವಾಗಿರುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಕನ್ಯಾ: ಉನ್ನತ ಅಧಿ ಕಾರಿ ಭೇಟಿಗಾಗಿ ದಿನವಿಡೀ ಓಡಾಡಬೇಕಾದ ಪರಿಸ್ಥಿತಿ ಎದುರಾಗುವುದು.
ತುಲಾ: ಗಣ್ಯ ವ್ಯಕ್ತಿಗಳನ್ನು ಸಂಪರ್ಕಿಸುವಿರಿ. ತಾಯಿಯ ಆರೋಗ್ಯದಲ್ಲಿ ಚೇತರಿಕೆ.
ವೃಶ್ಚಿಕ: ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ ಯಾಗುವುದರಿಂದ ವೈದ್ಯರನ್ನು ಭೇಟಿ ಮಾಡಿ.
ಧನುಸ್ಸು: ನಕಾರಾತ್ಮಕವಾಗಿ ಮಾತನಾಡುವ ಜನರಿಂದ ದೂರವಿರುವುದು ಬಹಳ ಒಳ್ಳೆಯದು.
ಮಕರ: ಯಾರದ್ದೋ ಮಾತು ಕೇಳಿ ನಿಮ್ಮ ಅಮೂಲ್ಯ ಸಮಯ ಹಾಳುಮಾಡಿಕೊಳ್ಳದಿರಿ.
ಕುಂಭ: ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳಿವೆ. ಪ್ರಮುಖ ನಿರ್ಧಾರ ಕೈಗೊಳ್ಳಲು ಉತ್ತಮ ಸಮಯ.
ಮೀನ: ಸಮಾಧಾನದಿಂದ ಕಾರ್ಯನಿರ್ವಹಿಸಿದರೆ ಜಯ ಕಟ್ಟಿಟ್ಟ ಬುತ್ತಿ ಎಂಬ ಅರಿವು ಇರಲಿ.