Thursday, November 14, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-11-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-11-2024)

Today's Horoscope

ನಿತ್ಯ ನೀತಿ : ಅಧಿಕಾರ ಬಯಸುವವರಿಗೆ ಸಾಮರ್ಥ್ಯ, ಸಹನೆ, ನಿಷ್ಪಕ್ಷಪಾತತನ ಹಾಗೂ ಕರ್ತವ್ಯ ನಿಷ್ಠೆ ಈ ನಾಲ್ಕೂ ಗುಣಗಳು ಅವಶ್ಯಕ.

ಪಂಚಾಂಗ : ಗುರುವಾರ, 14-11-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ /ಶರದ್ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ /ತಿಥಿ: ತ್ರಯೋದಶಿ / ನಕ್ಷತ್ರ: ಅಶ್ವಿನಿ / ಯೋಗ: ಸಿದ್ಧಿ / ಕರಣ: ಗರಜ

ಸೂರ್ಯೋದಯ : ಬೆ.06.18
ಸೂರ್ಯಾಸ್ತ : 05.50
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30

ರಾಶಿಭವಿಷ್ಯ :
ಮೇಷ
: ನೀವು ಅಂದುಕೊಳ್ಳದ ರೀತಿಯಲ್ಲಿ ಖರ್ಚಿನ ಪ್ರಮಾಣ ವಿಪರೀತ ಹೆಚ್ಚಾಗುತ್ತದೆ.
ವೃಷಭ: ವಿದ್ಯಾರ್ಥಿಗಳು ಹೊಸದಾಗಿ ಕೋರ್ಸ್ ಸೇರುವ ಮುನ್ನ ಅಳೆದು, ತೂಗಿ ಮುಂದೆ ಹೆಜ್ಜೆ ಇಡಿ.
ಮಿಥುನ: ಎಲ್ಲರನ್ನೂ ಮೆಚ್ಚಿಸುವ ಪ್ರಯತ್ನದಲ್ಲಿ ನೀವು ವಿಫಲರಾಗುವಿರಿ. ಎಚ್ಚರಿಕೆಯಿಂದಿರಿ.

ಕಟಕ: ಬಡ್ತಿ, ವರ್ಗಾವಣೆ, ವೇತನ ಹೆಚ್ಚಳದ ನಿರೀಕ್ಷೆ ಯಲ್ಲಿರುವವರಿಗೆ ಅಂದು ಕೊಂಡಂತೆಯೇ ಆಗಲಿದೆ.
ಸಿಂಹ: ಕಾನೂನು ತೊಡಕು ಗಳು ಬೆನ್ನತ್ತಿ ಬರಲಿವೆ. ಜವಾಬ್ದಾರಿ ನಿರ್ವಹಿಸುವುದು ಕಷ್ಟಸಾಧ್ಯವಾಗಲಿದೆ.
ಕನ್ಯಾ: ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವೈದ್ಯರನ್ನು ಸಂಪರ್ಕಿಸಿ.

ತುಲಾ: ವ್ಯಾಪಾರ- ಉದ್ಯಮ ನಡೆಸುತ್ತಿರುವ ವರಿಗೆ ಲಾಭ ದೊರೆಯಲಿದೆ.
ವೃಶ್ಚಿಕ: ಗರ್ಭಿಣಿಯರು ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ.
ಧನುಸ್ಸು: ವಿವಾಹದ ಆಚೆಗಿನ ಸಂಬಂಧದ ಕಡೆಗೆ ಆಕರ್ಷಿತರಾಗಿ, ನೆಮ್ಮದಿ ಹಾಳಾಗುವ ಸಾಧ್ಯತೆ ಇದೆ.

ಮಕರ: ಮಧುಮೇಹದಂಥ ಆರೋಗ್ಯ ಸಮಸ್ಯೆ ಇರುವವರು ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿ.
ಕುಂಭ: ವ್ಯವಹಾರದಲ್ಲಿ ಹೂಡಿಕೆ ಮಾಡುವ ಮುನ್ನ ನಾಲ್ಕು ಬಾರಿ ಆಲೋಚಿಸುವುದು ಸೂಕ್ತ.
ಮೀನ: ಉದ್ಯೋಗಸ್ಥರಿಗೆ ಮೇಲಧಿ ಕಾರಿಗಳಿಂದ ಅತ್ಯುತ್ತಮ ಬೆಂಬಲ ಸಿಗಲಿದೆ.

RELATED ARTICLES

Latest News