Thursday, September 19, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-06-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-06-2024)

ನಿತ್ಯ ನೀತಿ : ಯಾವುದಕ್ಕೂ ಭಯ ಪಡದಿರು. ನಿನ್ನ ಕರ್ಮ, ನಿನ್ನ ಧರ್ಮ, ನಿನ್ನ ಶ್ರಮ, ಭಗವಂತನ ಮೇಲಿರುವ ನಿನ್ನ ಪ್ರೇಮ ನಿನ್ನನ್ನು ರಕ್ಷಿಸುವುದು. ಇದು ಸತ್ಯ.

ಪಂಚಾಂಗ : 15-06-2024, ಶನಿವಾರ
ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಶುಕ್ಲ ಪಕ್ಷ
ತಿಥಿ: ನವಮಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ವ್ಯತೀಪಾತ / ಕರಣ: ಬಾಲವ

ಸೂರ್ಯೋದಯ – ಬೆ.05.54
ಸೂರ್ಯಾಸ್ತ – 06.47
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :
ಮೇಷ
: ಮಕ್ಕಳಿಂದ ಸಂತೋಷ ಉಂಟಾಗುವುದು. ಆರೋಗ್ಯದ ಕಡೆ ಗಮನ ಹರಿಸಿ.
ವೃಷಭ: ನೀವು ಹಿಂದೆ ಮಾಡಿದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಶತ್ರುಗಳ ಕಾಟ ತಪ್ಪಲಿದೆ.
ಮಿಥುನ: ಹೊಸ ಉದ್ಯಮ ಪ್ರಾರಂಭಿಸಲು ಬಯಸುವವರಿಗೆ ಉತ್ತಮ ಯಶಸ್ಸು ಸಿಗಲಿದೆ.

ಕಟಕ: ಗುರು-ಹಿರಿಯರ ಭೇಟಿ ಮಾಡುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಒಲವು.
ಸಿಂಹ: ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುವವರಿಗೆ ಶುಭ ಫಲ ಸಿಗಲಿದೆ.
ಕನ್ಯಾ: ಹಿತವಾದ ಮಾತುಗಳಿಂದ ಸಂಗಾತಿ, ಪ್ರೀತಿ ಪಾತ್ರರನ್ನು ಮೆಚ್ಚಿಸುವಿರಿ.

ತುಲಾ: ನೀವು ಮಾಡುವ ಕೆಲಸ-ಕಾರ್ಯಗಳಿಗೆ ತಾಯಿ ಯಿಂದ ಸಹಾಯ ಸಿಗಲಿದೆ.
ವೃಶ್ಚಿಕ: ಷೇರು ಮಾರು ಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರು ಎಚ್ಚರಿಕೆಯಿಂದಿರುವುದು ಒಳಿತು.
ಧನುಸ್ಸು: ವೃತ್ತಿ ಕ್ಷೇತ್ರದಲ್ಲಿ ಉತ್ತಮ ಬದಲಾವಣೆ ಗಳಾಗುತ್ತವೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.

ಮಕರ: ಕೃಷಿ ಭೂಮಿ ಮತ್ತು ಅದಕ್ಕೆ ಸಂಬಂಧಿಸಿತ ಕೆಲಸ-ಕಾರ್ಯಗಳಿಂದ ಹೆಚ್ಚು ಲಾಭ ಗಳಿಸುವಿರಿ.
ಕುಂಭ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿವೆ.
ಮೀನ: ನಿವೇಶನ ಖರೀದಿಗೆ ನಿರ್ಧರಿಸುವಿರಿ. ಹಿರಿಯರ ಮಾತಿಗೆ ಗೌರವ ಕೊಡಿ.

RELATED ARTICLES

Latest News