ನಿತ್ಯ ನೀತಿ : ಕಿತ್ತುಕೊಂಡು ತಿನ್ನುವುದರಿಂದ ಹೊಟ್ಟೆ ತುಂಬುವುದಿಲ್ಲ. ಹಂಚಿಕೊಂಡು ತಿನ್ನುವುದರಿಂದ ಹಸಿವು ಹೆಚ್ಚುವುದಿಲ್ಲ.
ಪಂಚಾಂಗ : ಗುರುವಾರ , 15-08-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ: ದಶಮಿ / ನಕ್ಷತ್ರ: ಜ್ಯೇಷ್ಠಾ / ಯೋಗ: ವೈಧೃತಿ / ಕರಣ: ವಣಿಜ್
ಸೂರ್ಯೋದಯ – ಬೆ.06.08
ಸೂರ್ಯಾಸ್ತ – 06.41
ರಾಹುಕಾಲ – 1.30-3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00-10.30
ರಾಶಿಭವಿಷ್ಯ :
ಮೇಷ: ನಿಮ್ಮದಲ್ಲದ ತಪ್ಪಿಗೆ ಸಣ್ಣದೊಂದು ಶಿಕ್ಷೆ ಅನುಭವಿಸಬೇಕು. ಹಣದ ಕೊರತೆ ಇರುವುದಿಲ್ಲ.
ವೃಷಭ: ಪತ್ನಿ ಹಾಗೂ ಮಕ್ಕಳ ಸಹಕಾರದಿಂದ ಕೆಲಸ-ಕಾರ್ಯಗಳು ಸುಗಮವಾಗಿ ನೆರವೇರಲಿವೆ.
ಮಿಥುನ: ಜೀವನ ಸಂಗಾತಿಯಿಂದ ಆರ್ಥಿಕ ಲಾಭ ಮತ್ತು ಗೌರವ ಪಡೆಯುವಿರಿ.
ಕಟಕ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದುಕೊಳ್ಳಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.
ಸಿಂಹ: ಹಿತಶತ್ರುಗಳು ನಿಮ್ಮ ಹೆಸರನ್ನು ಹಾಳು ಮಾಡುವ ಪ್ರಯತ್ನ ಮಾಡಬಹುದು.
ಕನ್ಯಾ: ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ.
ತುಲಾ: ಯಾರ ಮೇಲೂ ವೈಯಕ್ತಿಕವಾಗಿ ದ್ವೇಷ ಸಾಧಿಸಲು ಹೋಗದಿರಿ. ಕಷ್ಟ ಎದುರಿಸಬೇಕಾಗುತ್ತದೆ.
ವೃಶ್ಚಿಕ: ಬುದ್ಧಿವಂತಿಕೆ ಯಿಂದ ಕೆಲಸ ಮಾಡುವಿರಿ ಮತ್ತು ಅದರಲ್ಲಿ ನೀವು ಯಶಸ್ಸು ಸಾಧಿಸುವಿರಿ.
ಧನುಸ್ಸು: ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.
ಮಕರ: ನಿರೀಕ್ಷಿತ ಮೂಲಗಳಿಂದ ಆದಾಯ ಬರ ಲಿದೆ.ಅಮೂಲ್ಯ ವಸ್ತುಗಳ ಖರೀದಿಗೆ ಉತ್ತಮ ದಿನ.
ಕುಂಭ: ನಿಮ್ಮ ನಡವಳಿಕೆಯಲ್ಲಿನ ಬದಲಾವಣೆ ಇತರರಿಗೆ ಚರ್ಚೆಯ ವಿಷಯವಾಗಲಿದೆ.
ಮೀನ: ಬಂದ ಅವಕಾಶ ಕೈ ತಪ್ಪುವುದು. ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಲಿದೆ.