ನಿತ್ಯ ನೀತಿ :
ಜೀವನದಲ್ಲಿ ಒಂದು ಗುರಿ ಇರಬೇಕು. ಗುರಿ ಇಲ್ಲದ ಬಾಳು ವ್ಯರ್ಥ. ಜೀವನದ ನಿಜವಾದ ಗುರಿಯ ಗುಟ್ಟನ್ನು ಅರ್ಥ ಮಾಡಿಸುವವನೇ ನಿಜವಾದ ಗುರು.
ಪಂಚಾಂಗ : ಶನಿವಾರ, 16-12-2023
ಶೋಭಕೃತ್ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಶ್ರವಣ / ಯೋಗ: ಧ್ರುವ / ಕರಣ: ವಣಿಜ್
ಸೂರ್ಯೋದಯ : ಬೆ.06.34
ಸೂರ್ಯಾಸ್ತ : 05.56
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30
ಇಂದಿನ ರಾಶಿಭವಿಷ್ಯ :
ಮೇಷ: ಸಂಗಾತಿಯೊಂದಿಗೆ ಹಣಕಾಸಿನ ಸಮಸ್ಯೆ ಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಿರಿ.
ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಿ ವರ್ಗಕ್ಕೆ ಹತ್ತಿರವಾಗಿರುವುದರಿಂದ ಬಡ್ತಿ ಮತ್ತು ವೇತನ ಹೆಚ್ಚಳದ ರೂಪದಲ್ಲಿ ಲಾಭ ದೊರೆಯಲಿದೆ.
ಮಿಥುನ: ಹೊಸ ಪ್ರದೇಶಕ್ಕೆ ಭೇಟಿ ನೀಡುವ ಅವಕಾಶವೊಂದು ದಿಢೀರನೆ ಒದಗಿಬರಲಿದೆ.
ಕಟಕ: ಆದಾಯ ಹೆಚ್ಚಾಗಿರುವುದರಿಂದ ಯಾವುದೇ ತೊಂದರೆ ಇರುವುದಿಲ್ಲ.
ಸಿಂಹ: ಪ್ರತಿಯೊಂದು ಕೆಲಸವನ್ನು ಎಚ್ಚರಿಕೆ ಮತ್ತು ಪ್ರಾಮಾಣಿಕತೆಯಿಂದ ಮಾಡಿ.
ಕನ್ಯಾ: ತಲೆನೋವು, ಮೊಣಕಾಲು ನೋವು ಇತ್ಯಾದಿಗಳಿಂದ ತೊಂದರೆಗೆಒಳಗಾಗಬಹುದು.
ತುಲಾ: ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆ ಪಡೆಯಿರಿ.
ವೃಶ್ಚಿಕ: ಹಲವು ದಿನಗಳಿಂದ ಮಾಡಬೇಕೆಂದು ಕೊಂಡಿದ್ದ ಕೆಲಸ ಯಶಸ್ವಿಯಾಗಿ ನಡೆಯಲಿದೆ.
ಧನುಸ್ಸು: ಖಾಸಗಿ ಉದ್ಯೋಗದಲ್ಲಿರುವವರಿಗೆ ಒಳ್ಳೆಯ ಒಳ್ಳೆಯ ಸುದ್ದಿ ಸಿಗಲಿದೆ.
ಮಕರ: ಕೃಷಿ ಭೂಮಿ ಮತ್ತು ಅದಕ್ಕೆ ಸಂಬಂಧಿಸಿದÀ ಕೆಲಸ-ಕಾರ್ಯಗಳಿಂದ ಹೆಚ್ಚು ಲಾಭ ಗಳಿಸುವಿರಿ.
ಕುಂಭ: ಉದ್ಯೋಗದಲ್ಲಿನ ಮಾನಸಿಕ ಕಿರಿಕಿರಿಯಿಂದಾಗಿ ಕೆಟ್ಟ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಮೀನ: ಜವಾಬ್ದಾರಿಗಳನ್ನು ಪೂರೈಸಿ. ಖಂಡಿತ ವಾಗಿಯೂ ಉನ್ನತ ಮಟ್ಟಕ್ಕೆ ಏರುವಿರಿ.
ಹೆಚ್ಚುತ್ತಿರುವ ಹೃದಯ ಸಂಬಂಧಿ ಕಾಯಿಲೆಗಳು, ಆತಂಕ ವ್ಯಕ್ತಪಡಿಸಿದ ವೈದ್ಯರು