Sunday, December 22, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-12-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-12-2024)

Today's Horoscope

ನಿತ್ಯ ನೀತಿ : ಒಂದು ಹೂವಿನ ಸುವಾಸನೆ ಗಾಳಿ ಬೀಸುವ ದಿಕ್ಕಿನಲ್ಲಿ ಮಾತ್ರ ಪಸರಿಸುತ್ತದೆ. ಆದರೆ ಒಳ್ಳೆಯ ವ್ಯಕ್ತಿಯ ಗುಣಗಾನ ಎಲ್ಲ ದಿಕ್ಕುಗಳಲ್ಲೂ ಪಸರಿಸುತ್ತದೆ.

ಪಂಚಾಂಗ : ಸೋಮವಾರ , 16-12-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಆರಿದ್ರಾ / ಯೋಗ: ಶುಕ್ಲ / ಕರಣ: ತೈತಿಲ
ಸೂರ್ಯೋದಯ – ಬೆ.06.34
ಸೂರ್ಯಾಸ್ತ – 05.56
ರಾಹುಕಾಲ – 7.30-9.00
ಯಮಗಂಡ ಕಾಲ – 10.30-12.00
ಗುಳಿಕ ಕಾಲ -1.30-3.00

ರಾಶಿಭವಿಷ್ಯ :
ಮೇಷ: ವಿದ್ಯಾರ್ಥಿಗಳು ಹೊಸದಾಗಿ ಕೋರ್ಸ್ ಸೇರುವ ಮುನ್ನ ಅಳೆದು, ತೂಗಿ ಮುಂದೆ ಹೆಜ್ಜೆ ಇಡಿ.
ವೃಷಭ: ನೀವು ಅಂದುಕೊಳ್ಳದ ರೀತಿಯಲ್ಲಿ ಖರ್ಚಿನ ಪ್ರಮಾಣ ವಿಪರೀತ ಹೆಚ್ಚಾಗುತ್ತದೆ.
ಮಿಥುನ: ಎಲ್ಲರನ್ನೂ ಮೆಚ್ಚಿಸುವ ಪ್ರಯತ್ನದಲ್ಲಿ ನೀವು ವಿಲರಾಗುವಿರಿ. ಎಚ್ಚರಿಕೆಯಿಂದಿರಿ.

ಕಟಕ: ಬಡ್ತಿ, ವರ್ಗಾವಣೆ, ವೇತನ ಹೆಚ್ಚಳದ ನಿರೀಕ್ಷೆ ಯಲ್ಲಿರುವವರಿಗೆ ಅಂದು ಕೊಂಡಂತೆಯೇ ಆಗಲಿದೆ.
ಸಿಂಹ: ಕಾನೂನು ತೊಡಕು ಗಳು ಬೆನ್ನತ್ತಿ ಬರಲಿವೆ. ಜವಾಬ್ದಾರಿ ನಿರ್ವಹಿಸುವುದು ಕಷ್ಟಸಾಧ್ಯವಾಗಲಿದೆ.
ಕನ್ಯಾ: ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವೈದ್ಯರನ್ನು ಸಂಪರ್ಕಿಸಿ.

ತುಲಾ: ವ್ಯಾಪಾರ- ಉದ್ಯಮ ನಡೆಸುತ್ತಿರುವ ವರಿಗೆ ಲಾಭ ದೊರೆಯಲಿದೆ.
ವೃಶ್ಚಿಕ: ಗರ್ಭಿಣಿಯರು ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಿ.
ಧನುಸ್ಸು : ವ್ಯವಹಾರದಲ್ಲಿ ಹೂಡಿಕೆ ಮಾಡುವ ಮುನ್ನ ನಾಲ್ಕು ಬಾರಿ ಆಲೋಚಿಸುವುದು ಸೂಕ್ತ.

ಮಕರ: ಮಧುಮೇಹದಂಥ ಆರೋಗ್ಯ ಸಮಸ್ಯೆ ಇರುವವರು ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿ.
ಕುಂಭ: ವಿವಾಹದ ಆಚೆಗಿನ ಸಂಬಂಧದ ಕಡೆಗೆ ಆಕರ್ಷಿತರಾಗಿ, ನೆಮದಿ ಹಾಳಾಗುವ ಸಾಧ್ಯತೆ ಇದೆ.
ಮೀನ: ಉದ್ಯೋಗಸ್ಥರಿಗೆ ಮೇಲಽ ಕಾರಿಗಳಿಂದ ಅತ್ಯುತ್ತಮ ಬೆಂಬಲ ಸಿಗಲಿದೆ.

RELATED ARTICLES

Latest News