ನಿತ್ಯ ನೀತಿ : ಸತ್ಯಕ್ಕೆ ತೂಕವಿರುತ್ತದೆ. ಆದರೆ, ಅದು ಭಾರವಾಗಿರುವುದಿಲ್ಲ.
ಪಂಚಾಂಗ : ಮಂಗಳವಾರ, 17-12-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಿತೀಯಾ / ನಕ್ಷತ್ರ: ಪುನರ್ವಸು / ಯೋಗ: ಬ್ರಹ / ಕರಣ: ವಣಿಜ್
ಸೂರ್ಯೋದಯ – ಬೆ.06.35
ಸೂರ್ಯಾಸ್ತ – 05.57
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30
ರಾಶಿಭವಿಷ್ಯ :
ಮೇಷ: ಅಪರೂಪದ ಅತಿಥಿ ಆಗಮನದಿಂದ ಮನಸ್ಸಿಗೆ ಸಂತೋಷವಾಗಲಿದೆ.
ವೃಷಭ: ಆರೋಗ್ಯ ಸುಧಾರಣೆಗೆ ಯೋಗ ಮಾಡಿ.
ಮಿಥುನ: ಅನಿರೀಕ್ಷಿತ ತಲೆ ನೋವು ಕಾಡಲಿದೆ.
ಕಟಕ: ಸಮಾಧಾನಚಿತ್ತ ದಿಂದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಕೊಳ್ಳಬಹುದು.
ಸಿಂಹ: ಆಲೋಚಿಸಿ ನಿರ್ಧಾರ ಕೈಗೊಳ್ಳಿ .
ಕನ್ಯಾ: ವಿರೋಧಿ ಗಳೂ ಸಹ ಮೆಚ್ಚುವಂತಹ ಕಾರ್ಯ ಸಾಧನೆ ಮಾಡುವಿರಿ.
ತುಲಾ: ಚಿನ್ನಾಭರಣ ಖರೀದಿಸುವಿರಿ.
ವೃಶ್ಚಿಕ: ನೆರೆಹೊರೆಯವ ರೊಂದಿಗೆ ಮನಸ್ತಾಪ ಮಾಡಿಕೊಳ್ಳದಿರಿ.
ಧನುಸ್ಸು : ವೈದ್ಯವೃತ್ತಿಯಲ್ಲಿರುವವರು ಅಧಿಕ ಶ್ರಮ ಪಡುವುದರಿಂದ ಆಯಾಸ ಉಂಟಾಗಲಿದೆ.
ಮಕರ: ಉಲ್ಲಾಸದಿಂದ ಮೈಮರೆಯದಿರಿ.
ಕುಂಭ: ವ್ಯವಹಾರದಲ್ಲಿ ಉನ್ನತಿಯಾಗಿ ಸಮಾಜದಲ್ಲಿ ಗೌರವ-ಮನ್ನಣೆ ದೊರೆಯಲಿದೆ.
ಮೀನ: ಚಿಂತೆಗೆ ಅವಕಾಶವಿಲ್ಲ.