ನಿತ್ಯ ನೀತಿ : ಕಣ್ಣೀರು ಸುರಿಸುವುದರಿಂದ ಜೀವನ ನಡೆಸಲು ಸಾಧ್ಯವಿಲ್ಲ. ಬೆವರ ಹನಿ ಸುರಿಸುವುದರಿಂದ ಮಾತ್ರ ಜೀವನ ನಡೆಸಲು ಸಾಧ್ಯ.
ಪಂಚಾಂಗ : ಮಂಗಳವಾರ, 18-02-2025
ಕ್ರೋ ನಾಮ ಸಂವತ್ಸರ / ಉತ್ತರಾಯಣ / ಸೌರ ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಚಿತ್ತಾ / ಯೋಗ: ಗಂಡ / ಕರಣ: ಗರಜೆ
ಸೂರ್ಯೋದಯ – ಬೆ.06.41
ಸೂರ್ಯಾಸ್ತ – 06.26
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30
ರಾಶಿಭವಿಷ್ಯ :
ಮೇಷ: ಕಚೇರಿಯಲ್ಲಿ ಕೆಲವು ಹೊಸ ಮತ್ತು ಪ್ರಮುಖ ಜವಾಬ್ದಾರಿಗಳು ನಿಮ್ಮ ಮೇಲೆ ಬೀಳಲಿವೆ.
ವೃಷಭ: ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವ ವರಿಗೆ ನಿರೀಕ್ಷಿತ ಲಾಭ ದೊರೆಯುವ ಸಾಧ್ಯತೆಯಿದೆ.
ಮಿಥುನ: ಹಣದ ಕೊರತೆ ದೂರವಾಗುತ್ತದೆ ಮತ್ತು ನಿಮ್ಮ ಎಲ್ಲಾ ಚಿಂತೆ, ತೊಂದರೆಗಳು ಸಹ ಕೊನೆಗೊಳ್ಳುತ್ತವೆ.
ಕಟಕ: ಶಿಕ್ಷಣ ಕ್ಷೇತ್ರ ದಲ್ಲಿ ಮಕ್ಕಳ ಕಾರ್ಯಕ್ಷಮತೆ ತುಂಬಾ ಉತ್ತಮವಾಗಿರುತ್ತದೆ. ಇದರಿಂದಾಗಿ ನೀವು ತುಂಬಾ ಸಂತೋಷವಾಗಿರುತ್ತೀರಿ.
ಸಿಂಹ: ಕಡಿಮೆ ಶ್ರಮದಲ್ಲಿ ಉತ್ತಮ ಲಾಭ ಪಡೆಯ ಬಹುದು. ಆದಾಯದಲ್ಲಿ ಹೆಚ್ಚಳ ವಾಗುವ ಲಕ್ಷಣಗಳಿವೆ. ಚಿಂತಿಸುವ ಅಗತ್ಯವಿಲ್ಲ.
ಕನ್ಯಾ: ನೀವು ಮಾಡುವ ಕೆಲಸ-ಕಾರ್ಯಗಳಿಗೆ ಮನೆಯ ಸದಸ್ಯರ ಬೆಂಬಲ ದೊರೆಯಲಿದೆ.
ತುಲಾ: ಹಣದ ಕೊರತೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ವೃಶ್ಚಿಕ: ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ನಿರ್ಲಕ್ಷ್ಯ ವಹಿಸದಿರುವುದು ಉತ್ತಮ.
ಧನುಸ್ಸು: ಮನೆಯ ಜವಾಬ್ದಾರಿಗಳನ್ನು ಪೂರೈಸು ವಲ್ಲಿ ಪ್ರೀತಿಪಾತ್ರರ ಬೆಂಬಲ ಪಡೆಯುತ್ತೀರಿ.
ಮಕರ: ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ದೂರ ಪ್ರಯಾಣ ಮಾಡದಿರಿ.
ಕುಂಭ: ವ್ಯಾಪಾರಕ್ಕೆ ಸಂಬಂ ಸಿದ ಜನರ ಆರ್ಥಿಕ ಪರಿಸ್ಥಿತಿ ಬಲಗೊಳ್ಳುವುದು. ಉತ್ತಮ ದಿನ.
ಮೀನ: ಕಚೇರಿಯಲ್ಲಿ ಉನ್ನತ ಅ ಕಾರಿಯೊಂದಿಗೆ ವಾದ-ವಿವಾದ ನಡೆಯುವ ಸಾಧ್ಯತೆಗಳಿವೆ.