ನಿತ್ಯ ನೀತಿ : ಎಲ್ಲರೂ ಜಗತ್ತು ಬದಲಾಗಿದೆ ಎನ್ನುತ್ತಾರೆ. ಆದರೆ, ಮೆಣಸಿನ ಕಾರ ಬದಲಾಗಿಲ್ಲ. ಮಾವಿನ ಹಣ್ಣಿನ ಸಿಹಿ ಬದಲಾಗಿಲ್ಲ. ಎಲೆಗಳ ಬಣ್ಣ ಬದಲಾಗಿಲ್ಲ. ಬದಲಾಗಿದ್ದು ಮನುಷ್ಯನ ಮಾನವೀಯತೆ…
ಪಂಚಾಂಗ : ಸೋಮವಾರ , 19-08-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ: ಹುಣ್ಣಿಮೆ / ನಕ್ಷತ್ರ: ಶ್ರವಣ / ಯೋಗ: ಶೋಭನ / ಕರಣ: ವಿಷ್ಠಿ
ಸೂರ್ಯೋದಯ – ಬೆ.06.08
ಸೂರ್ಯಾಸ್ತ -06.38
ರಾಹುಕಾಲ – 7.30-9.00
ಯಮಗಂಡ ಕಾಲ – 10.30-12.00
ಗುಳಿಕ ಕಾಲ – 1.30-3.00
ರಾಶಿಭವಿಷ್ಯ :
ಮೇಷ: ಹಳೆಯ ಕಾನೂನು ವಿಷಯಗಳಿಗೆ ಪರಿಹಾರ ದೊರೆಯಲಿದೆ. ದೂರ ಪ್ರಯಾಣ ಮಾಡುವ ಸಾಧ್ಯತೆಗಳಿವೆ.
ವೃಷಭ: ರಾಜಕೀಯದವರಿಂದ ಅನುಕೂಲ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ.
ಮಿಥುನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾಗು ವುದು. ಭಾವನೆಗಳಿಗೆ ಪೆಟ್ಟು ಬೀಳಲಿದೆ.
ಕಟಕ: ವಿಪರೀತ ಕೆಲಸದಿಂದಾಗಿ ದೇಹಾಲಸ್ಯ ಉಂಟಾಗುವುದರಿಂದ ವಿಶ್ರಾಂತಿ ಬಯಸುವಿರಿ.
ಸಿಂಹ: ಅನಗತ್ಯ ಚರ್ಚೆಗಳಿಗೆ ಆಸ್ಪದ ನೀಡದಿರಿ. ಸಾಲ ಮಾಡುವ ಸ್ಥಿತಿ ತಂದುಕೊಳ್ಳಬೇಡಿ.
ಕನ್ಯಾ: ಮನೆಯಲ್ಲಿ ಸಂತಸದ ವಾತಾವರಣವಿರಲಿದೆ. ನಿರೀಕ್ಷಿತ ಸ್ಥಾನಮಾನ ಸಿಗಲಿದೆ.
ತುಲಾ: ವಿದ್ಯಾರ್ಥಿಗಳ ಪ್ರತಿಭೆಗೆ ತಕ್ಕ ಗೌರವ ಹಾಗೂ ಪ್ರತಿಫಲ ಸಿಗಲಿದೆ.
ವೃಶ್ಚಿಕ: ಕೆಲಸ-ಕಾರ್ಯಗಳಲ್ಲಿ ಜನಪ್ರಿಯತೆ ಗಳಿಸುವಿರಿ.
ಧನುಸ್ಸು: ಭೂಮಿ, ಆಸ್ತಿ ವಿಚಾರಗಳಲ್ಲಿ ಪ್ರಗತಿ ಕಾಣುವಿರಿ. ಮಕ್ಕಳಿಂದ ಶುಭವಾರ್ತೆ ಕೇಳುವಿರಿ.
ಮಕರ: ಪತ್ನಿಯ ಸಹಕಾರದಿಂದ ನಿಮ್ಮ ಕೆಲಸ-ಕಾರ್ಯಗಳು ಸುಸೂತ್ರವಾಗಿ ನೆರವೇರಲಿವೆ.
ಕುಂಭ: ಭೂ ವ್ಯವಹಾರ ದಲ್ಲಿ ತೊಡಗಿಕೊಂಡ ನಿಮಗೆ ಹೆಚ್ಚಿನ ಲಾಭ ಸಿಗಲಿದೆ.
ಮೀನ: ನಿಮ್ಮ ಉಜ್ವಲ ಭವಿಷ್ಯಕ್ಕೆ ಹೊಸ ಸ್ನೇಹ ಸಹಕಾರಿಯಾಗಲಿದೆ.