Monday, September 16, 2024
Homeಮನರಂಜನೆಮೆಗಾಸ್ಟಾರ್ ಚಿರು ಚಿತ್ರದಲ್ಲಿ ನಟಿಸಲ್ಲ ಎಂದ ಕನ್ನಡತಿ ಶ್ರೀಲೀಲಾ

ಮೆಗಾಸ್ಟಾರ್ ಚಿರು ಚಿತ್ರದಲ್ಲಿ ನಟಿಸಲ್ಲ ಎಂದ ಕನ್ನಡತಿ ಶ್ರೀಲೀಲಾ

ಬೆಂಗಳೂರು, ಆ.18- ಕನ್ನಡದ ಕಿಸ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಕನ್ನಡತಿ ಶ್ರೀಲೀಲಾ ಅವರು ಮೆಗಾಸ್ಟಾರ್ ಚಿರಂಜೀವಿ ನಟನೆಯ ವಿಶುಂಭರ ಚಿತ್ರದಲ್ಲಿ ನಟಿಸುವುದಿಲ್ಲ ಎಂಬ ಸ್ಪಷ್ಟ ನಿಲುವನ್ನು ತಳೆದಿದ್ದಾರೆ.

ಟಾಲಿವುಡ್ ಚಿತ್ರರಂಗದಲ್ಲಿ 2024ರ ಬಹು ನಿರೀಕ್ಷೆ ಹುಟ್ಟಿಸಿರುವ ಮೆಗಾಸ್ಟಾರ್ ಚಿರಂಜೀವಿ ಹಾಗೂ ಬಿಂಬಸಾರ ಚಿತ್ರದ ನಿರ್ದೇಶಕ ಮಲ್ಲಾಡಿ ವಶಿಷ್ಟ ಕಾಂಬಿನೇಷನ್ನ ವಿಶುಂಭರ ಚಿತ್ರದಲ್ಲಿನ ಒಂದು ಸ್ಪೆಷಾಲ್ ಗೀತೆಯಲ್ಲಿ ಬಂದು ನಟಿಸುವಂತೆ ನಟಿ ಶ್ರೀಲೀಲಾಗೆ ಭರ್ಜರಿ ಆಫರ್ ನೀಡಲಾಗಿತ್ತು. ಆದರೆ ಈ ಅವಕಾಶವನ್ನು ಒಲ್ಲೆ ಎಂದು ಹೇಳುವ ಮೂಲಕ ನಟಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಶ್ರೀಲೀಲಾ ಅವರು ಕಿಸ್ ಚಿತ್ರದ ನಂತರ ಟಾಲಿವುಡ್ಗೆ ಲಗ್ಗೆ ಇಟ್ಟು ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಅವುಗಳಲ್ಲಿ ಬಹುತೇಕ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ನೆಲ ಕಚ್ಚಿದ್ದವು. 2023ರ ವರ್ಷದಲ್ಲಿ ಶ್ರೀಲೀಲಾ, ರಾಮ್ಪೋತಿನೇನಿ ನಟನೆಯ ಸ್ಕಂದ, ನಂದಮೂರಿ ಬಾಲಕೃಷ್ಣ ಅಭಿನಯದ ಭಗವಾನ್ ಕೇಸರಿ, ವೈಷ್ಣವ್ ತೇಜ್ ನಟಿಸಿದ್ದ ಆದಿಕೇಶವ, ನಿತಿನ್ ಮುಖ್ಯಭೂಮಿಕೆಯಲ್ಲಿದ್ದ ಎಕ್ಸಾರ್ಟಿನರಿ ಮ್ಯಾನ್ ಹಾಗೂ ಪ್ರಿನ್‌್ಸ ಮಹೇಶ್ಬಾಬು ನಟನೆಯ ಗುಂಟೂರು ಖರಂ ಚಿತ್ರಗಳಲ್ಲಿ ಕನ್ನಡತಿ ಶ್ರೀಲೀಲಾ ಅಭಿನಯಿಸಿ ದ್ದರೂ ಯಾವ ಚಿತ್ರವೂ ಬಾಕ್‌್ಸಆಫೀಸ್ನಲ್ಲಿ ಜೋರು ಸದ್ದು ಮಾಡಿರಲಿಲ್ಲ.

2023ರಲ್ಲಿ ಒಂದೇ ಒಂದು ಹಿಟ್ ಚಿತ್ರವನ್ನು ನೀಡದಿದ್ದರೂ ಟಾಲಿವುಡ್ನಲ್ಲಿ ಬಹು ಬೇಡಿಕೆಯ ನಟಿಯಾಗಿರುವ ಶ್ರೀಲೀಲಾ ಅವರು, ಪ್ರಸ್ತುತ ರಾಬಿನ್ವುಡ್, ಉಸ್ತಾದ್ ಭಗತ್ ಸಿಂಗ್ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದು ಮತ್ತು ಬಲು ಎಚ್ಚರಿಕೆಯಿಂದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಶ್ರೀಲೀಲಾ ಮೆಗಾಸ್ಟಾರ್ ಚಿರಂಜೀವಿ ಹಾಗೂ ತ್ರಿಷಾ ಮುಖ್ಯಭೂಮಿಕೆಯಲ್ಲಿರುವ ವಿಶುಂಭರ ಚಿತ್ರದ ವಿಶೇಷ ಹಾಡಿನಲ್ಲಿ ನಟಿಸಲು ನಿರಾಕರಿಸಿದ್ದಾರೆ.

ಟಾಲಿವುಡ್ನ ಬಲು ಬೇಡಿಕೆಯ ನಟಿಯರಾದ ತಮನ್ನಾ ಸೇರಿದಂತೆ ಹಲವು ನಟಿಯರು ವಿಶೇಷ ಹಾಡಿನಲ್ಲಿ ನಟಿಸಿದ ನಂತರ ನಟಿಯಾಗುವ ಅವಕಾಶದಿಂದ ವಂಚಿತರಾಗಿರುವುದು ಕೂಡ ಶ್ರೀಲೀಲಾ ಈ ನಿರ್ಣಯ ತೆಗೆದುಕೊಂಡಿರಬಹುದು.

RELATED ARTICLES

Latest News