Thursday, November 20, 2025
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-11-2025)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-11-2025)

Today's Horoscope

ನಿತ್ಯ ನೀತಿ : ಅಧರ್ಮದಿಂದ ಶತ್ರು ಕೆಲವೊಮ್ಮೆ ಗೆಲ್ಲಬಹುದು, ಆದರೆ ಅವನ ಕರ್ಮ ಎದುರಾಗುವ ವೇಳೆಗೆ ಆತನನ್ನು ಧರ್ಮ ಸುಡಲು ಪ್ರಾರಂಭಿಸುತ್ತದೆ. ಆಗ ಅವನ ಅಂತ್ಯವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.

ಪಂಚಾಂಗ : ಬುಧವಾರ, 19-11-2025
ಶೋಭಕೃತ್‌ನಾಮ ಸಂವತ್ಸರ /ದಕ್ಷಿಣಾಯನ / ಋತು: ಸೌರ ಹೇಮಂತ / ಮಾಸ:ಕಾರ್ತೀಕ / ಪಕ್ಷ: ಕೃಷ್ಣ / ತಿಥಿ: ಚತುರ್ದಶಿ / ನಕ್ಷತ್ರ: ಸ್ವಾತಿ / ಯೋಗ: ಸೌಭಾಗ್ಯ / ಕರಣ: ಚತುಷ್ಪಾದ
ಸೂರ್ಯೋದಯ – ಬೆ.06.20
ಸೂರ್ಯಾಸ್ತ – 5.50
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ -10.30-12.00

ರಾಶಿಭವಿಷ್ಯ :
ಮೇಷ
: ಅಪರೂಪದ ಅತಿಥಿ ಆಗಮನದಿಂದ ಮನಸ್ಸಿಗೆ ಸಂತೋಷವಾಗಲಿದೆ.
ವೃಷಭ: ಆರೋಗ್ಯ ಸುಧಾರಣೆಗಾಗಿ ಯೋಗ ಮಾಡಿ.
ಮಿಥುನ: ಅನಿರೀಕ್ಷಿತ ತಲೆ ನೋವು ಕಾಡಲಿದೆ.

ಕಟಕ: ಸಮಾಧಾನಚಿತ್ತದಿಂದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಕೊಳ್ಳಬಹುದು.
ಸಿಂಹ: ದುಡುಕುತನ ಒಳ್ಳೆಯದಲ್ಲ.
ಕನ್ಯಾ: ವಿರೋಧಿಗಳೂ ಸಹ ಮೆಚ್ಚುವಂತಹ ಕಾರ್ಯಸಾಧನೆ ಮಾಡುವಿರಿ.

ತುಲಾ: ಚಿನ್ನಾಭರಣ ಖರೀದಿಸುವಿರಿ.
ವೃಶ್ಚಿಕ: ನೆರೆಹೊರೆಯ ವರೊಂದಿಗೆ ಯಾವುದೇ ಕಾರಣಕ್ಕೂ ಮನಸ್ತಾಪ ಮಾಡಿಕೊಳ್ಳದಿರಿ.
ಧನುಸ್ಸು: ವೈದ್ಯವೃತ್ತಿಯಲ್ಲಿರುವವರು ಅಧಿಕ ಶ್ರಮ ಪಡುವುದರಿಂದ ಆಯಾಸ ಉಂಟಾಗಲಿದೆ.

ಮಕರ: ಉಲ್ಲಾಸದಿಂದ ಮೈಮರೆಯದಿರಿ.
ಕುಂಭ: ವ್ಯವಹಾರದಲ್ಲಿ ಉನ್ನತಿಯಾಗಿ ಸಮಾಜದಲ್ಲಿ ಗೌರವ-ಮನ್ನಣೆ ದೊರೆಯಲಿದೆ.
ಮೀನ: ವಸ್ತ್ರ ವಿನ್ಯಾಸಕರಿಗೆ ಅಧಿಕ ಲಾಭ ದೊರೆಯಲಿದೆ. ಚಿಂತೆಗೆ ಅವಕಾಶವಿಲ್ಲ.

RELATED ARTICLES
- Advertisment -

Latest News