ನಿತ್ಯ ನೀತಿ : ಜೀವನದಲ್ಲಿ ಕೆಲವೇ ಕೆಲವರು ನಿಮ ದಾರಿಗೆ ಕಲ್ಲುಗಳನ್ನು ಎಸೆಯುತ್ತಲೇ ಇರುತ್ತಾರೆ. ಆ ಕಲ್ಲುಗಳಿಂದ ತಾವು ಗೋಡೆ ಕಟ್ಟುವಿರೋ, ಸೇತುವೆ ನಿರ್ಮಿಸುವಿರೋ ಎಂಬುದು ನಿಮಗೆ ಬಿಟ್ಟ ವಿಚಾರ. ನೆನಪಿರಲಿ. ನಿಮಗೆ ನೀವೇ ಬದುಕಿನ ಶಿಲ್ಪಿಗಳು.
ಪಂಚಾಂಗ : ಬುಧವಾರ, 20-08-2025
ವಿಶ್ವಾವಸುನಾಮ ಸಂವತ್ಸರ / ದಕ್ಷಿಣಾಯನ / ಸೌರ ವರ್ಷ ಋತು / ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಪುನರ್ವಸು / ಯೋಗ: ಸಿದ್ಧಿ / ಕರಣ: ಗರಜೆ
ಸೂರ್ಯೋದಯ – ಬೆ.06.08
ಸೂರ್ಯಾಸ್ತ – 06.38
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00
ರಾಶಿಭವಿಷ್ಯ :
ಮೇಷ: ಆತ್ಮಗೌರವ ಹೆಚ್ಚಾಗಲಿದೆ. ಬರಹಗಾರರಿಗೆ ಹೆಚ್ಚು ಅವಕಾಶಗಳು ಸಿಗಲಿವೆ.
ವೃಷಭ: ಒಂದೇ ಸಮಯಕ್ಕೆ ನಾನಾ ಬಗೆಯ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.
ಮಿಥುನ: ವಿದ್ಯಾರ್ಥಿಗಳಿಗೆ ವಿದ್ಯೆಯ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ಕಟಕ: ಆರೋಗ್ಯದ ವಿಚಾರದಲ್ಲಿ ಕಾಳಜಿ ವಹಿಸಿ.
ಸಿಂಹ: ವೃತ್ತಿ ಜೀವನದಲ್ಲಿ ಸಣ್ಣಪುಟ್ಟ ತೊಂದರೆ ಗಳು ಎದುರಾಗಬಹುದು.
ಕನ್ಯಾ: ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ದುಡಿಯುವ ನಿಮ್ಮ ಮೇಲೆ ಮೇಲಧಿಕಾರಿಗಳಿಗೆ ಹೆಚ್ಚು ಭರವಸೆ ಮೂಡಲಿದೆ.
ತುಲಾ: ಮಕ್ಕಳ ವಿಷಯ ದಲ್ಲಿ ಹೆಚ್ಚು ಕಾಳಜಿ ವಹಿಸಿ.
ವೃಶ್ಚಿಕ: ಕಚೇರಿಯಲ್ಲಿ ಆತ್ಮ ವಿಶ್ವಾಸದಿಂದ ಕೆಲಸ ಮಾಡಿ.
ಧನುಸ್ಸು: ಉತ್ತಮ ಆದಾಯ ಬರಲಿದೆ. ಮನೆಯಲ್ಲಿ ಶುಭ ಸಮಾರಂಭ ನಡೆಯಲಿದೆ.
ಮಕರ: ತಂದೆ-ತಾಯಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಮಾಡುವ ಅವಕಾಶ ದೊರೆಯಲಿದೆ.
ಕುಂಭ: ಕಷ್ಟದ ಪರಿಸ್ಥಿತಿಯಲ್ಲಿ ಜನಬಲದ ಕೊರತೆಯಾದರೂ ಸ್ನೇಹಿತರ ಸಹಕಾರ ಸಿಗಲಿದೆ.
ಮೀನ: ಆರೋಗ್ಯದ ಬಗ್ಗೆ ಸ್ವಲ್ಪ ಗಮನವಿರಲಿ.
- ಇಟಲಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಾರತೀಯ ದಂಪತಿ ಸಾವು
- ಬೆಂಗಳೂರಲ್ಲಿ ನಕಲಿ ನಂಬರ್ಪ್ಲೇಟ್ ವಾಹನಗಳ ಹಾವಳಿ
- ಜೈಲಿನಲ್ಲಿ ದರ್ಶನ್ ಸ್ಥಿತಿ ಕಂಡು ಕಣ್ಣೀರಿಟ್ಟ ಪತ್ನಿ ವಿಜಯಲಕ್ಷ್ಮಿ
- 11 ಲಕ್ಷ ಮೌಲ್ಯದ 18 ದ್ವಿಚಕ್ರ ವಾಹನಗಳು-ಕಾರು ಜಪ್ತಿ, ನಾಲ್ವರ ಬಂಧನ
- ಡಿಸಿಎಂ ಮನೆಯಿಂದಲೇ ಬೆಂಗಳೂರಲ್ಲಿ ಸಮೀಕ್ಷೆ ಶುರು, ಸಿಡಿಮಿಡಿಗೊಂಡು ಪ್ರಶ್ನೆಗಳಿಗೆ ಉತ್ತರಿಸಿದ ಡಿಕೆಶಿ..!