ನಿತ್ಯ ನೀತಿ : ಜೀವನದಲ್ಲಿ ಯಾರು ಇನ್ನೊಬ್ಬರ ಸಂತೋಷ, ನೆಮದಿಯನ್ನು ನೋಡಿ ಮನಃಪೂರ್ವಕವಾಗಿ ಆನಂದದಿಂದ ಸಂತೋಷ ಪಡುತ್ತಾರೋ ಅವರೇ ನಿಜವಾಗಲೂ ಹೃದಯವಂತಿಕೆಯ ಸ್ನೇಹಿತರು.
ಪಂಚಾಂಗ : ಭಾನುವಾರ , 20-10-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಶರದ್ ಋತು / ಆಶ್ವಯುಜ ಮಾಸ / ಕೃಷ್ಣ ಪಕ್ಷ /
ತಿಥಿ: ತೃತೀಯಾ / ನಕ್ಷತ್ರ: ಕೃತ್ತಿಕಾ / ಯೋಗ: ವ್ಯತೀಪಾತ / ಕರಣ: ಭವ
ಸೂರ್ಯೋದಯ – ಬೆ.06.11
ಸೂರ್ಯಾಸ್ತ – 05.58
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30
ರಾಶಿಭವಿಷ್ಯ :
ಮೇಷ: ಬೆನ್ನು ನೋವು ಮತ್ತು ಸ್ನಾಯು ಸಂಬಂಧಿತ ಸಮಸ್ಯೆಗಳಿಂದ ಬಳಲುವಿರಿ.
ವೃಷಭ: ಸಂಗಾತಿಯಿಂದ ಉಡುಗೊರೆ ಸಿಗಲಿದೆ. ಆರ್ಥಿಕವಾಗಿ ಲಾಭದಾಯಕ ದಿನವಾಗಿದೆ.
ಮಿಥುನ: ಕುಟುಂಬದಲ್ಲಿ ಶುಭ ಕಾರ್ಯಕ್ರಮಗಳು ನಡೆಯುತ್ತವೆ, ನೀವು ಅದರಲ್ಲಿ ಭಾಗಿಯಾಗುವಿರಿ.
ಕಟಕ: ಸ್ನೇಹಿತರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಒಳಿತು.
ಸಿಂಹ: ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳಿವೆ. ಪ್ರಮುಖ ನಿರ್ಧಾರ ಕೈಗೊಳ್ಳಲು ಉತ್ತಮ ಸಮಯ.
ಕನ್ಯಾ: ಹಿರಿಯರ ಆಶೀ ರ್ವಾದ ಸದಾಕಾಲ ನಿಮ್ಮೊಂದಿಗಿರುತ್ತದೆ. ಉದ್ಯೋಗ ದಲ್ಲಿ ಲಾಭ ಸಿಗಲಿದೆ.
ತುಲಾ: ಕೌಟುಂಬಿಕ ಕಲಹ ಬೀದಿಗೆ ಬರ ಲಿದ್ದು, ಮಾತಿಗಿಂತ ವೌನ ವಾಗಿರುವುದೇ ಲೇಸು.
ವೃಶ್ಚಿಕ: ವ್ಯಾಪಾರದಲ್ಲಿ ಲಾಭವಿದೆ. ಅಪರಿಚಿತ ರೊಂದಿಗೆ ಹೆಚ್ಚು ಸಮಯ ಕಳೆಯದಿರಿ.
ಧನುಸ್ಸು: ಸಂಗಾತಿಯೊಂದಿಗೆ ಸಮಾಧಾನದಿಂದ ವರ್ತಿಸಿ.
ಮಕರ: ಭೂ ವಿವಾದ, ಎಲೆಕ್ಟ್ರಾನಿಕ್ ವ್ಯಾಪಾರದಲ್ಲಿ ಪ್ರಗತಿ ಸಾಧಿಸುವಿರಿ. ಹೊಸ ವಾಹನ ಖರೀದಿ.
ಕುಂಭ: ಉದ್ಯಮದಲ್ಲಿರುವ ಮಹಿಳೆಯರಿಗೆ ಒತ್ತಡ ಹೆಚ್ಚಾಗಲಿದೆ. ವಾಹನ ಚಾಲನೆಯಲ್ಲಿ ಜಾಗ್ರತೆ ವಹಿಸಿ.
ಮೀನ: ಹಣಕಾಸು ವ್ಯವಹಾರದಲ್ಲಿ ಲಾಭ.