ನಿತ್ಯ ನೀತಿ : ಸಂತೋಷವಾಗಿರಲು ಕಾರಣಗಳ ಅಗತ್ಯವಿರುವುದಿಲ್ಲ. ಅರ್ಥ ಮಾಡಿಕೊಳ್ಳುವ ಮನಸ್ಸು ಮತ್ತು ಒಳ್ಳೆಯ ಮಾತುಗಳು ಇದ್ದರೆ ಸಾಕು.
ಪಂಚಾಂಗ : ಬುಧವಾರ, 23-07-2025
ವಿಶ್ವಾವಸುನಾಮ ಸಂವತ್ಸರ / ಉತ್ತರಾಯಣ / ಸೌರ ವರ್ಷ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಆರಿದ್ರಾ / ಯೋಗ: ವ್ಯಾಘಾತ / ಕರಣ: ವಿಷ್ಟಿ
ಸೂರ್ಯೋದಯ – ಬೆ.06.03
ಸೂರ್ಯಾಸ್ತ – 06.49
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00
ರಾಶಿಭವಿಷ್ಯ :
ಮೇಷ: ಇನ್ನೊಬ್ಬರ ಮಾತುಗಳನ್ನು ಆಲಿಸಿ ತೀರ್ಮಾನಕ್ಕೆ ಬರುವುದು ಅನಿರ್ವಾಯವಾಗಲಿದೆ.
ವೃಷಭ: ಕುಟುಂಬದಲ್ಲಿ ಪರಿಸ್ಥಿತಿಗಳು ಏರಿಳಿತಗಳಿಂದ ಕೂಡಿರುತ್ತವೆ.
ಮಿಥುನ: ವ್ಯಾಪಾರದಲ್ಲಿ ಶತ್ರುಗಳ ಕಾಟ.
ಕಟಕ: ಸಹೋದರತ್ವದಲ್ಲಿ ದ್ವೇಷ ಉಂಟಾಗಲಿದೆ.
ಸಿಂಹ: ಕಾನೂನು ತೊಡಕು ಎದುರಿಸಬೇಕಾದ ಸಂದರ್ಭ ಬರಬಹುದು. ಸಾಲಕ್ಕೆ ಜಾಮೀನಾಗಿ ನಿಲ್ಲದಿರಿ.
ಕನ್ಯಾ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳಾಗಲಿವೆ.
ತುಲಾ: ಹಣದ ವಿಷಯ ದಲ್ಲಿ ದೊಡ್ಡ ಸಮಸ್ಯೆ ಇರುವುದಿಲ್ಲ. ಮನಸ್ಸಿಗೆ ನೆಮ್ಮದಿ ಸಿಗಲಿದೆ.
ವೃಶ್ಚಿಕ: ಹೊಸ ಜನರನ್ನು ಭೇಟಿ ಮಾಡುವುದರಿಂದ ಹೆಚ್ಚು ಪ್ರಯೋಜನ ವಾಗಲಿದೆ.
ಧನುಸ್ಸು: ಬಂದ ಅವಕಾಶ ಕೈ ತಪ್ಪುವುದು. ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಲಿದೆ.
ಮಕರ: ಸ್ನೇಹಿತರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಒಳಿತು.
ಕುಂಭ: ಹೊಸ ವಾಹನ ಖರೀದಿಸುವ ಆಲೋಚನೆಯನ್ನು ಮುಂದೂಡುವುದು ಒಳಿತು.
ಮೀನ: ಇತರರ ಮಾತು ಕೇಳಿ ನಿರ್ಧಾರ ಕೈಗೊಳ್ಳದಿರುವುದು ಒಳಿತು.
- ಬೆಂಗಳೂರಲ್ಲಿ ಸ್ಪೋಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ, ತನಿಖೆಗೆ ಆಗ್ರಹ
- ಎ-ಖಾತಾ ಪರಿವರ್ತನೆ ನೆಪದಲ್ಲಿ ಲೂಟಿ ಮಾಡುತ್ತಿದೆ ಸರ್ಕಾರ : ಹೆಚ್ಡಿಕೆ ಆರೋಪ
- ಅದಾನಿ ಗ್ರೂಪ್ಗೆ ಲಾಭ ಮಾಡಿಕೊಡಲು ಎಲ್ಐಸಿ ಹಣ ದುರುಪಯೋಗ ; ಜೈರಾಮ್ ರಮೇಶ್ ಆರೋಪ
- ಶಬರಿಮಲೆ ಚಿನ್ನ ನಷ್ಟ ಪ್ರಕರಣ : ಬೆಂಗಳೂರು, ಬಳ್ಳಾರಿಯಲ್ಲಿ ಕೇರಳ ಎಸ್ಐಟಿ ಶೋಧ
- ಯಶವಂತಪುರದ ಗಾಂಧಿಪಾರ್ಕ್ನಲ್ಲಿ ಡಿಕೆಶಿ ಬೆಂಗಳೂರು ನಡಿಗೆ, ನಾಗರಿಕರ ಅಹವಾಲು ಆಲಿಸಿದ ಡಿಸಿಎಂ
