Saturday, July 13, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-06-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-06-2024)

ನಿತ್ಯ ನೀತಿ : ಆಶಾವಾದಿ ಮಾತ್ರ ಪ್ರತಿ ಕಷ್ಟದಲ್ಲೂ ಅವಕಾಶವನ್ನು ಕಂಡುಕೊಳ್ಳಬಹುದು.

ಪಂಚಾಂಗ : ಸೋಮವಾರ , 24-06-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ /
ಕೃಷ್ಣ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಉತ್ತರಾಷಾಢ / ಯೋಗ: ಐಂದ್ರ /ಕರಣ: ವಣಿಜ್‌

ಸೂರ್ಯೋದಯ – ಬೆ.05.56
ಸೂರ್ಯಾಸ್ತ – 06.49
ರಾಹುಕಾಲ – 7.30-9.00
ಯಮಗಂಡ ಕಾಲ – 10.30-12.00
ಗುಳಿಕ ಕಾಲ – 1.30-3.00

ರಾಶಿಭವಿಷ್ಯ :
ಮೇಷ: ಆದಾಯ ಹೆಚ್ಚಾಗಿರುವುದರಿಂದ ಯಾವುದೇ ತೊಂದರೆ ಇರುವುದಿಲ್ಲ.
ವೃಷಭ: ಹಲವು ವಿಷಯಗಳ ಬಗ್ಗೆ ಜನರು ನಿಮ್ಮಿಂದ ಸಲಹೆ-ಸೂಚನೆಗಳನ್ನು ಪಡೆಯುವರು.
ಮಿಥುನ: ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಹೆಚ್ಚು ವ್ಯಾಯಾಮ ಮಾಡಬೇಕು.

ಕಟಕ: ಅಂದುಕೊಂಡ ಕೆಲಸ-ಕಾರ್ಯಗಳಲ್ಲಿ ಒಂದಷ್ಟು ಶ್ರಮವಿದ್ದರೂ ತಕ್ಕ ಪ್ರತಿಫಲ ಸಿಗಲಿದೆ.
ಸಿಂಹ: ಹಣಕಾಸು ವಿಚಾರ ದಲ್ಲಿ ದೃಢ ನಿರ್ಧಾರ ಕೈಗೊಳ್ಳುವುದು ಒಳಿತು.
ಕನ್ಯಾ: ಹಿರಿಯರ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸುವುದು ಸೂಕ್ತ.

ತುಲಾ: ಮಕ್ಕಳಿಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುವಲ್ಲಿ ಹೆಚ್ಚು ಸಮಯ ಕಳೆಯುವಿರಿ.
ವೃಶ್ಚಿಕ: ಷೇರು ವ್ಯವಹಾರ ದಲ್ಲಿ ತೊಡಗಿಕೊಂಡವರಿಗೆ ಲಾಭ ಸಿಗಲಿದೆ.
ಧನುಸ್ಸು: ನೌಕರರಿಗೆ ಉದ್ಯೋಗದಲ್ಲಿನ ಹೊಸ ವ್ಯವಸ್ಥೆಯಿಂದಾಗಿ ಮನಸ್ಸಿಗೆ ಸಂತಸ ಸಿಗಲಿದೆ.

ಮಕರ: ಸೇವೆಯ ಆಧಾರದ ಮೇಲೆ ಕೆಲಸದಲ್ಲಿ ಬಡ್ತಿ ದೊರೆಯಲಿದೆ. ಹೆಚ್ಚು ಲಾಭ ಗಳಿಸುವಿರಿ.
ಕುಂಭ: ಒಡಹುಟ್ಟಿದವರಿಂದ ದೂರವಾಗಿದ್ದರೆ ಮಾತನಾಡುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿ.
ಮೀನ: ಸುಲಭವಾಗಿ ಜೀರ್ಣವಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸಿ.

RELATED ARTICLES

Latest News