Friday, October 24, 2025
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-10-2025)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-10-2025)

Today's Horoscope

ನಿತ್ಯ ನೀತಿ : ಉಪದೇಶ ಮಾಡುವುದು ಸುಲಭ. ಆದರೆ, ಉಪದೇಶವನ್ನು ತನ್ನಾಂತರ್ಯದಲ್ಲಿ ಅನುಷ್ಠಾನ ಮಾಡಿಕೊಂಡು ಉಪದೇಶಿಸುವವರು ಸಿಗುವುದು ವಿರಳ.

ಪಂಚಾಂಗ : ಶುಕ್ರವಾರ, 24-10-2025
ಶೋಭಕೃತ್‌ನಾಮ ಸಂವತ್ಸರ / ದಕ್ಷಿಣಾಯನ /ಋತು:ಸೌರ ಹೇಮಂತ್‌ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ತೃತೀಯಾ / ನಕ್ಷತ್ರ: ಅನುರಾಧಾ / ಯೋಗ: ಸೌಭಾಗ್ಯ / ಕರಣ: ತೈತಿಲ
ಸೂರ್ಯೋದಯ – ಬೆ.06.11
ಸೂರ್ಯಾಸ್ತ – 5.57
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00

ರಾಶಿಭವಿಷ್ಯ :
ಮೇಷ: ಹೊಸ ವಾಹನ ಖರೀದಿಸುವ ನಿಮ್ಮ ಬಯಕೆ ಈಡೇರುವುದರಿಂದ ಮನಸ್ಸಿಗೆ ಸಂತಸ ಸಿಗಲಿದೆ.
ವೃಷಭ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿವೆ.
ಮಿಥುನ: ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ ಸಾ ಸುವಿರಿ. ಆರೋಗ್ಯದ ಕಡೆ ಗಮನ ಹರಿಸಿ.

ಕಟಕ: ನೀವು ಹಿಂದೆ ಮಾಡಿದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಶತ್ರುಗಳ ಕಾಟ ತಪ್ಪಲಿದೆ.
ಸಿಂಹ: ಹಣ ಹೇಗೆ ವಿನಿಯೋಗವಾಗಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಬಹಳ ಮುಖ್ಯ.
ಕನ್ಯಾ: ಹೊಸ ಉದ್ಯಮ ಪ್ರಾರಂಭಿಸಲು ಬಯಸುವವರಿಗೆ ಉತ್ತಮ ಯಶಸ್ಸು ಸಿಗಲಿದೆ.

ತುಲಾ: ಹಿತವಾದ ಮಾತುಗಳಿಂದ ಸಂಗಾತಿ, ಪ್ರೀತಿಪಾತ್ರರನ್ನು ಮೆಚ್ಚಿಸುವಿರಿ.
ವೃಶ್ಚಿಕ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿವೆ.
ಧನುಸ್ಸು: ದಾಂಪತ್ಯ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಮಕರ: ಹಣಕಾಸು ಸಮಸ್ಯೆಯಿದ್ದರೂ ಹೇಗಾದರೂ ಹಣ ಹೊಂದಾಣಿಕೆಯಾಗುತ್ತದೆ.
ಕುಂಭ: ಸ್ನೇಹಿತನಿಗೆ ಸಹಾಯ ಮಾಡುವಿರಿ. ಸಂಗಾತಿಯೊಂದಿಗೆ ಜಗಳವಾಡುವ ಸಾಧ್ಯತೆಯಿದೆ. ಆಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.
ಮೀನ: ಸಹೋದ್ಯೋಗಿಗಳೊಂದಿಗೆ ಹಲವಾರು ವಿಷಯಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು.

RELATED ARTICLES

Latest News