ನಿತ್ಯ ನೀತಿ : ಮನುಷ್ಯ ಆಸ್ತಿಯನ್ನು ಕಳೆದುಕೊಂಡು ಬಡವನಾಗುವುದಿಲ್ಲ. ಆತ್ಮೀಯರನ್ನು ಕೊಂಡಾಗ ಬಡವನಾಗುತ್ತಾನೆ.
ಪಂಚಾಂಗ : ಸೋಮವಾರ, 24-11-2025
ವಿಶ್ವಾವಸು ನಾಮ ಸಂವತ್ಸರ / ದಕ್ಷಿಣಾಯನ / ಋತು: ಸೌರ ಹೇಮಂತ / ಮಾಸ: ಮಾರ್ಗಶಿರ / ಪಕ್ಷ: ಶುಕ್ಲ ./ ತಿಥಿ: ಚತುರ್ಥಿ / ನಕ್ಷತ್ರ: ಪೂ.ಷಾ. / ಯೋಗ: ಶೂಲ / ಕರಣ: ವಣಿಜ್
ಸೂರ್ಯೋದಯ – ಬೆ.06.23
ಸೂರ್ಯಾಸ್ತ – 5.51
ರಾಹುಕಾಲ – 7.30-9.00
ಯಮಗಂಡ ಕಾಲ – 10.30-12.00
ಗುಳಿಕ ಕಾಲ – 1.30-3.00
ರಾಶಿಭವಿಷ್ಯ :
ಮೇಷ: ಕಟ್ಟಡ ನಿರ್ಮಾಣಗಾರರಿಗೆ ಹೆಚ್ಚಿನ ಕೆಲಸ ಇರುವುದು. ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ.
ವೃಷಭ: ಆರ್ಥಿಕ, ಮಾನಸಿಕ ಹಾಗೂ ದೈಹಿಕ ಆರೋಗ್ಯದ ವಿಷಯದಲ್ಲಿ ಹೆಚ್ಚು ಕಾಳಜಿ ವಹಿಸಿ.
ಮಿಥುನ: ಸಹೋದರರು, ಬಂಧುಗಳು ನೀಡುವ ಸಲಹೆಗಳಿಂದ ಸಮಸ್ಯೆಗಳು ದೂರವಾಗಲಿವೆ.
ಕಟಕ: ಸಾಧ್ಯವಾದಷ್ಟೂ ರಾತ್ರಿ ಪ್ರಯಾಣ ಮಾಡ ಬೇಡಿ. ಖರ್ಚು ಸ್ವಲ್ಪ ಹೆಚ್ಚಾಗಬಹುದು.
ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ಹೊಣೆಗಾರಿಕೆ ಹೆಚ್ಚಾಗಲಿದೆ.
ಕನ್ಯಾ: ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಅವಕಾಶಗಳು ದೊರೆಯಲಿವೆ.
ತುಲಾ: ಹಣಕಾಸು ಲೇವಾ ದೇವಿ ವ್ಯವಹಾರದಲ್ಲಿ ಎಚ್ಚರ ವಹಿಸಿ.
ವೃಶ್ಚಿಕ: ಆರೋಗ್ಯದ ವಿಚಾರ ದಲ್ಲಿ ನಿರ್ಲಕ್ಷ್ಯ ವಹಿಸದಿರಿ.
ಧನುಸ್ಸು: ಯಾರದ್ದೋ ಮಾತು ಕೇಳಿ ನಿಮ್ಮ ಸಮಯ ಹಾಳುಮಾಡಿಕೊಳ್ಳದಿರಿ.
ಮಕರ: ಹಿಂದೆ ಎದುರಿಸಿದ ತೊಂದರೆಗಳು ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಕುಂಭ: ಕೆಲಸದ ಸ್ಥಳದಲ್ಲಿ ಹಿರಿಯ ಸಹೋ ದ್ಯೋಗಿಗಳಿಂದ ಸಹಾಯ-ಸಹಕಾರ ಸಿಗಲಿದೆ.
ಮೀನ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಹಿರಿಯರ ಸಲಹೆ ಪಡೆಯಿರಿ.
