Thursday, September 19, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-06-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-06-2024)

ನಿತ್ಯ ನೀತಿ : ರಾಮ ಎನ್ನುವವನೇ ರಾವಣನಿಗೆ ಇಷ್ಟವಾಗುವುದಿಲ್ಲ. ಕೃಷ್ಣ ಎನ್ನುವವನೇ ಕಂಸನಿಗೆ ಮೆಚ್ಚುಗೆಯಾಗುವುದಿಲ್ಲ ಎಂದಾದ ಮೇಲೆ ಎಲ್ಲರ ಮೆಚ್ಚುಗೆಗಾಗಿ ಬದುಕುತ್ತೇನೆ ಅಂದರೆ ಅರ್ಥವಿಲ್ಲ.

ಪಂಚಾಂಗ : ಮಂಗಳವಾರ , 25-06-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಶ್ರವಣ / ಯೋಗ: ವೈಧೃತಿ / ಕರಣ: ಭವ

ಸೂರ್ಯೋದಯ – ಬೆ.05.56
ಸೂರ್ಯಾಸ್ತ – 06.49
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30

ರಾಶಿಭವಿಷ್ಯ :
ಮೇಷ
: ಉದ್ಯೋಗದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಅವಕಾಶಗಳಿವೆ.
ವೃಷಭ: ಮಕ್ಕಳಿಂದ ಸಂತಸ ಸಿಗಲಿದೆ.
ಮಿಥುನ: ವಿದ್ಯಾರ್ಥಿಗಳು ಏಕಾಗ್ರತೆ ಕಾಯ್ದು ಕೊಳ್ಳಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.

ಕಟಕ: ಅಮೂಲ್ಯ ವಸ್ತುವಿನ ಕಳ್ಳತನವಾಗಲಿದೆ.
ಸಿಂಹ: ಇತರರ ಮಾತು ಕೇಳಿ ನಿರ್ಧಾರ ಕೈಗೊಳ್ಳದಿರುವುದು ಬಹಳ ಒಳಿತು.
ಕನ್ಯಾ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದು ಕೊಳ್ಳುವ ಸಾಮರ್ಥ್ಯವನ್ನು ಹೊಂದುತ್ತೀರಿ.

ತುಲಾ: ಬುದ್ಧಿಹೀನರಾಗಿ ವರ್ತಿಸುವಿರಿ. ಉಪನ್ಯಾಸಕ ವೃತ್ತಿಯವರಿಗೆ ನಷ್ಟ.
ವೃಶ್ಚಿಕ: ಶ್ರಮ ಹೆಚ್ಚಿದ್ದರೂ ದುಡಿಮೆ ಲಾಭದಾಯಕ ವಾಗಿರುತ್ತದೆ.
ಧನುಸ್ಸು: ಹೊಸ ಜನರ ಸಂಪರ್ಕ ಮಾಡಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಿ.

ಮಕರ: ಪತ್ನಿ ಸಹಕಾರದಿಂದ ಕೆಲಸ-ಕಾರ್ಯಗಳು ಸುಗಮವಾಗಿ ನೆರವೇರಲಿವೆ.
ಕುಂಭ: ಜವಾಬ್ದಾರಿ ಸ್ವೀಕರಿಸುವ ಮೊದಲು ಅದನ್ನು ನಿಭಾಯಿಸುವ ಬಗ್ಗೆ ಯೋಚಿಸಿ.
ಮೀನ: ಅಜೀರ್ಣ ಮತ್ತು ಉದರಕ್ಕೆ ಸಂಬಂಧಿಸಿದ ಅನಾರೋಗ್ಯ ಎದುರಾಗಲಿದೆ.

RELATED ARTICLES

Latest News