ನಿತ್ಯ ನೀತಿ : ನಮ್ಮ ಬಳಿ ಸಾಧ್ಯವಿಲ್ಲ ಎನ್ನುವುದು ಯಾವುದೂ ಇಲ್ಲ, ಮನಸ್ಸು ಅಂಜುತ್ತದೆಯಷ್ಟೇ ಧೈರ್ಯ ಮಾಡಿ ಮುಂದೆ ಸಾಗಿ ಗೆದ್ದರೆ ಇನ್ನೊಬ್ಬರಿಗೆ ಪಾಠ ಹೇಳಿಕೊಡಬಹುದು, ಸೋತರೆ ನಾವೇ ಪಾಠ ಕಲಿಯಬಹುದು. -ಗೌತಮ ಬುದ್ಧ
ಪಂಚಾಂಗ : ಮಂಗಳವಾರ, 25-11-2025
ವಿಶ್ವಾವಸುನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು: ಸೌರ ಹೇಮಂತ / ಮಾಸ: ಮಾರ್ಗಶಿರ / ಪಕ್ಷ: ಶುಕ್ಲ / ತಿಥಿ: ಪಂಚಮಿ / ನಕ್ಷತ್ರ: ಉ.ಷಾ. / ಯೋಗ: ಗಂಡ / ಕರಣ: ಬವ
ಸೂರ್ಯೋದಯ – ಬೆ.06.23
ಸೂರ್ಯಾಸ್ತ – 5.50
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30
ರಾಶಿಭವಿಷ್ಯ :
ಮೇಷ: ಲೇವಾದೇವಿ ವ್ಯವಹಾರವನ್ನು ಆಲೋಚನೆ ಮಾಡಿ ಮುಂದುವರೆಸುವುದು ಒಳಿತು.
ವೃಷಭ: ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳ ದಿರುವುದರಿಂದ ಸ್ನೇಹಿತರು ಕೋಪಗೊಳ್ಳಬಹುದು.
ಮಿಥುನ: ನೂತನ ಯೋಜನೆ ಪ್ರಾರಂಭಿಸಲು ಹಣಕಾಸಿನ ಕೊರತೆ ಇರುವುದಿಲ್ಲ.
ಕಟಕ: ಧೈರ್ಯ ಹೆಚ್ಚಾಗಿರುತ್ತದೆ.
ಸಿಂಹ: ಆಪತ್ಕಾಲದಲ್ಲಿ ಮಿತ್ರರಿಂದ ಸಹಾಯ ದೊರೆಯಲಿದೆ.
ಕನ್ಯಾ: ಯಂತ್ರೋಪಕಣ ಗಳನ್ನು ದುರಸ್ತಿ ಮಾಡುವ ವರಿಗೆ ಹೆಚ್ಚು ಕೆಲಸ ದೊರೆತು ಆದಾಯ ಸಿಗಲಿದೆ.
ತುಲಾ: ದುಷ್ಟ ಜನರ ಸಹವಾಸದಿಂದ ದೂರವಿರುವುದು ಒಳಿತು.
ವೃಶ್ಚಿಕ: ಆರ್ಥಿಕ ಏರುಪೇರಿನಿಂದಾಗಿ ಕುಟುಂಬದಲ್ಲಿ ಅಹಿತಕರ ವಾತಾವರಣ ಉಂಟಾಗಲಿದೆ.
ಧನುಸ್ಸು: ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ.
ಮಕರ: ಮನೆ ಸಮಸ್ಯೆಗಳ ಬಗ್ಗೆ ಗಮನ ಕೊಡಿ.
ಕುಂಭ: ಉದ್ಯಮಿಗಳು ಹೊಸ ಶಾಖೆ ತೆರೆಯಲು ಬೇಕಾದ ಅನುಕೂಲಗಳು ಒದಗುತ್ತವೆ.
ಮೀನ: ಉನ್ನತ ಸ್ಥಾನಮಾನ ದೊರೆಯಲಿದೆ.
