ನಿತ್ಯ ನೀತಿ : ಸಂಪತ್ತು, ವಸ್ತ್ರ, ನೆಂಟರು ಎಲ್ಲವೂ ಯಾವ ಕ್ಷಣದಲ್ಲಾದರೂ ನಿಮನ್ನು ಕೈ ಬಿಡಬಹುದು. ಆದರೆ, ಭಗವಂತನು ಮಾತ್ರ ಯಾವ ರೂಪದಲ್ಲಾದರೂ ಕೈ ಹಿಡಿಯುತ್ತಾನೆ, ರಕ್ಷಿಸುತ್ತಾನೆ.
ಪಂಚಾಂಗ : ಶನಿವಾರ , 26-04-2025
ವಿಶ್ವಾವಸು ನಾಮ ಸಂವತ್ಸರ / ಉತ್ತರಾಯಣ / ಸೌರ ಗ್ರೀಷ್ಠ ಋತು / ಚೈತ್ರ ಮಾಸ / ಕೃಷ್ಣ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ವೈಧೃತಿ / ಕರಣ: ವಿಷ್ಠಿ
ಸೂರ್ಯೋದಯ – ಬೆ.06.01
ಸೂರ್ಯಾಸ್ತ – 06.34
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.00-7.30
ರಾಶಿಭವಿಷ್ಯ :
ಮೇಷ: ಕುಟುಂಬದವರೊಂದಿಗೆ ಮಾತನಾಡುವಾಗ ಬುದ್ಧಿವಂತಿಕೆಯಿಂದ ಪದಗಳನ್ನು ಬಳಸಬೇಕು.
ವೃಷಭ: ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಮಿಥುನ: ತಮ್ಮನ್ನು ಕೇಂದ್ರೆಕರಿಸಲು ಪ್ರಯತ್ನಿಸಿ. ಇದರಿಂದ ಎಲ್ಲಾ ಕೆಲಸಗಳು ಉತ್ತಮವಾಗುತ್ತವೆ.
ಕಟಕ: ಆದಾಯ ಹೆಚ್ಚಿಸಿ ಕೊಳ್ಳಲು ಪ್ರಯತ್ನಿಸಿದರೆ ಯಶಸ್ಸು ಸಿಗಲಿದೆ.
ಸಿಂಹ: ಸಂಬಂ ಕರ ನಡುವಿನ ಯಾವುದೇ ವಿವಾದ ಪರಿಹರಿಸಲು ಮಧ್ಯಸ್ಥಿಕೆ ವಹಿಸಲು ಹೋಗದಿರಿ.
ಕನ್ಯಾ: ಆರೋಗ್ಯದ ಕೊರತೆಯಿಂದ ಹಣಕಾಸಿನ ಸ್ಥಿತಿ ದುರ್ಬಲಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.
ತುಲಾ: ಕೆಲಸದ ಸ್ಥಳದಲ್ಲಿ ಪ್ರತಿಯೊಂದನ್ನೂ ಸಮಾಧಾನಚಿತ್ತದಿಂದ ನಿಭಾಯಿಸಲು ಪ್ರಯತ್ನಿಸಿ.
ವೃಶ್ಚಿಕ: ಉದ್ಯೋಗದಲ್ಲಿ ಲಾಭ ಸಿಗಲಿದೆ. ವಿದ್ಯಾರ್ಥಿಗಳಿಗೆ ಹಲವು ಗೊಂದಲ ಉಂಟಾಗಲಿದೆ.
ಧನುಸ್ಸು: ಸಂಗಾತಿ ಬಗ್ಗೆ ತಪ್ಪು ತಿಳಿವಳಿಕೆ ಇದ್ದರೆ, ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.
ಮಕರ: ಮಕ್ಕಳ ಕಡೆಯಿಂದ ಸಂತೋಷದಾಯಕ ಸುದ್ದಿ ಕೇಳುವಿರಿ ಮತ್ತು ಇಂದು ಒಳ್ಳೆಯ ದಿನ.
ಕುಂಭ: ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ತೊಂದರೆ ಎದುರಾದರೂ ಸಹಪಾಠಿಗಳ ಬೆಂಬಲ ಸಿಗಲಿದೆ.
ಮೀನ: ಹಳೆಯ ಪರಿಚಯಸ್ಥರನ್ನು ಭೇಟಿ ಮಾಡುವಿರಿ. ಹಿರಿಯರ ಆಶೀರ್ವಾದ ಪಡೆಯಿರಿ.
- ಸಂಘ ಪರಿವಾರ ಯಾವತ್ತೂ ಸ್ವಾತಂತ್ರ್ಯ ಹೋರಾಟ ಮಾಡಲಿಲ್ಲ : ಸಿಎಂ ಟೀಕೆ
- ನಾನು ಭಾರತದ ಸೊಸೆ ಪಾಕ್ ಗೆ ಹೋಗಲ್ಲ : ಸೀಮಾ ಹೈದರ್
- ರಾಜ್ಯದಲ್ಲಿ 92 ಪಾಕ್ ಪ್ರಜೆಗಳು, ಬೆಂಗಳೂರಲ್ಲಿ ನಾಲ್ವರು
- ಪ್ರೀತಿಸುವಂತೆ ವಿದ್ಯಾರ್ಥಿನಿಗೆ ಒತ್ತಾಯಿಸಿ ಚಾಕು ಇರಿದ ಸಾಫ್ಟ್ ವೇರ್ ಎಂಜಿನಿಯರ್ ಅರೆಸ್ಟ್
- ತಟಸ್ಥ-ಪಾರದರ್ಶಕ ತನಿಖೆಗೂ ಸಿದ್ಧ : ಪಾಕ್ ಪ್ರಧಾನಿ ಷರೀಫ್