ನಿತ್ಯ ನೀತಿ : ಜೀವನದಲ್ಲಿ ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು. ಪ್ರಯತ್ನಿಸುವುದರಿಂದ ನಷ್ಟವಾಗುವುದಿಲ್ಲ. ಗೆದ್ದರೆ ಸಂತೋಷವಾಗ್ತುದೆ. ಸೋತರೆ ಅನುಭವ ಸಿಗುತ್ತೆ.
ಪಂಚಾಂಗ : ಸೋಮವಾರ, 26-05-2025
ವಿಶ್ವಾವಸುನಾಮ ಸಂವತ್ಸರ / ಉತ್ತರಾಯಣ / ಸೌರ ಗ್ರೀಷ ಋತು / ವೈಶಾಖ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ದಶಿ /ನಕ್ಷತ್ರ: ಭರಣಿ / ಯೋಗ: ಶೇಭನ / ಕರಣ: ಚತುಷ್ಪಾದ
ಸೂರ್ಯೋದಯ – ಬೆ.05.53
ಸೂರ್ಯಾಸ್ತ – 06.41
ರಾಹುಕಾಲ – 7.30-9.00
ಯಮಗಂಡ ಕಾಲ – 10.30-12.00
ಗುಳಿಕ ಕಾಲ – 1.30-3.00
ರಾಶಿಭವಿಷ್ಯ :
ಮೇಷ: ಅಣ್ಣ-ತಮ್ಮಂದಿರ ಒಳಜಗಳದಿಂದ ಮುಖ್ಯವಾದ ಕಾರ್ಯಕ್ರಮವೊಂದಕ್ಕೆ ತಡೆಯಾಗಲಿದೆ.
ವೃಷಭ: ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಮಿಥುನ: ದೇಹದಲ್ಲಿ ರಕ್ತದ ಒತ್ತಡ ಅಥವಾ ಮೂತ್ರ ಸಂಬಂ ಕಾಯಿಲೆಗಳ ಬಗ್ಗೆ ಜಾಗ್ರತೆ ವಹಿಸಿ.
ಕಟಕ: ಕೆಲಸದ ಸ್ಥಳದಲ್ಲಿ ಶ್ರಮ ಪಡುವ ಮನೋಭಾವ ಬೆಳೆಸಿಕೊಳ್ಳುವುದು ಒಳ್ಳೆಯದು.
ಸಿಂಹ: ನಂಬಿದವರಿಂದಲೇ ಮೋಸ ಹೋಗುವ ಸಾಧ್ಯತೆ ಯಿದೆ. ಎಚ್ಚರಿಕೆಯಿಂದಿರಿ.
ಕನ್ಯಾ: ನಿಸ್ವಾರ್ಥ ಮನೋಭಾವದಿಂದ ಮಾಡಿದ ಕೆಲಸಗಳು ಫಲ ನೀಡಲಿವೆ.
ತುಲಾ: ವಿಶ್ರಾಂತಿಯಿಲ್ಲದೆ ದುಡಿಯುವ ನಿಮಗೆ ಜನರ ದೃಷಿಯಿಂದಾಗಿ ಸ್ವಲ್ಪ ಮಟ್ಟಿನ ಅನಾರೋಗ್ಯ ಕಾಡಲಿದೆ.
ವೃಶ್ಚಿಕ: ಸಂಸ್ಥೆಯ ಆದಾಯ ಹೆಚ್ಚಿಸಿಕೊಳ್ಳಲು ಕಾರ್ಯ ಕ್ರಮಗಳನ್ನು ರೂಪಿಸುವಿರಿ.
ಧನುಸ್ಸು: ಕೌಟುಂಬಿಕ ವಿಚಾರದಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಕೆ ಬೇಡ.
ಮಕರ: ಕೆಲಸದ ವಿಚಾರದಲ್ಲಿ ಹಿರಿಯರ ಮಾತಿನಂತೆ ನಡೆದುಕೊಳ್ಳುವುದು ಒಳಿತು.
ಕುಂಭ: ಕಾಗದದ ಆಮದು ಹಾಗೂ ಉದ್ಯಮದಾರರಿಗೆ ಉತ್ತಮ ಆದಾಯವಿರುವುದು.
ಮೀನ: ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಶತ್ರುಗಳಿಂದ ತೊಂದರೆ.