Wednesday, August 27, 2025
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-08-2025)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-08-2025)

Today's Horoscope

ನಿತ್ಯ ನೀತಿ : ಜೀವನದಲ್ಲಿ ಖುಷಿ ಅನ್ನೋದನ್ನು ಎಲ್ಲೋ ಹುಡುಕಿಕೊಂಡು ಹೋಗದೆಯೇ ನಾವು ಕುಟುಂಬದಲ್ಲಿಯೇ ಪಡೆದುಕೊಳ್ಳಬೇಕು. ಸ್ವತಃ ನಾವಿರುವಲ್ಲಿಯೇ ಸಂತೋಷವನ್ನು ಸೃಷ್ಟಿ ಮಾಡಿ ಎಲ್ಲರಿಗೂ ಖುಷಿಪಡಿಸೋಣ.

ಪಂಚಾಂಗ : ಬುಧವಾರ, 27-08-2025
ವಿಶ್ವಾವಸುನಾಮ ಸಂವತ್ಸರ / ದಕ್ಷಿಣಾಯನ / ಸೌರ ಶರದ್‌ ಋತು / ಭಾದ್ರಪದ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಚಿತ್ತಾ / ಯೋಗ: ಶುಭ / ಕರಣ: ಭವ
ಸೂರ್ಯೋದಯ – ಬೆ.06.08
ಸೂರ್ಯಾಸ್ತ – 06.34
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ: ನಿಮ್ಮ ಸ್ವಭಾವದಲ್ಲಿ ಬದಲಾವಣೆಯಾಗ ಬೇಕು. ತಾಳ್ಮೆ- ಸಂಯಮ ತಂದುಕೊಳ್ಳಬೇಕು.
ವೃಷಭ: ಚಾಡಿ ಮಾತುಗಳನ್ನು ಕೇಳದಿರಿ. ಉದ್ಯೋಗದ ಕಡೆ ಗಮನ ನೀಡುವುದು ಒಳಿತು.
ಮಿಥುನ: ಕಾನೂನು ತೊಡಕು ಎದುರಿಸಬೇಕಾದ ಸಂದರ್ಭ ಬರಬಹುದು. ಸಾಲಕ್ಕೆ ಜಾಮೀನಾಗಿ ನಿಲ್ಲದಿರಿ.

ಕಟಕ: ಉದ್ಯೋಗದಲ್ಲಿ ನಿರೀಕ್ಷಿತ ರೀತಿಯಲ್ಲಿ ಪ್ರಗತಿ ಸಾ ಸಲು ಸಾಧ್ಯವಾಗುವುದಿಲ್ಲ.
ಸಿಂಹ: ಆರೋಗ್ಯ ಸಮಸ್ಯೆ ಗಳು ಎದುರಾಗಬಹುದು.
ಕನ್ಯಾ: ಅತಿಯಾದ ಆತ್ಮವಿಶ್ವಾಸ ಹೊಂದುವುದು ಬೇಡ. ಸುಖದಲ್ಲಿ ಮೈ ಮರೆಯದಿರಿ.

ತುಲಾ: ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗಕ್ಕೆ ಅವಕಾಶ ಗಳು ಒದಗಿ ಬರಲಿವೆ.
ವೃಶ್ಚಿಕ: ಸಂಗಾತಿಯಿಂದ ಸ್ವಲ್ಪ ಮಟ್ಟಿಗೆ ನಷ್ಟವಾಗುತ್ತದೆ. ಯಾವುದೇ ಕಾರಣಕ್ಕೂ ಕೆಲಸ ಬಿಡುವಂತಹ ನಿರ್ಧಾರ ಮಾಡದಿರಿ.
ಧನುಸ್ಸು: ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿ.

ಮಕರ: ಶತ್ರುಗಳ ಕಾಟ ಇರುತ್ತದೆ. ಆದರೆ ಅವರು ನಿಮ್ಮನ್ನು ಏನೂ ಮಾಡಲು ಆಗುವುದಿಲ್ಲ.
ಕುಂಭ: ಯಾವುದೇ ಅಪಾಯಕಾರಿ ಸವಾಲುಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ.
ಮೀನ: ಸೋದರ ಸಂಬಂ ಗಳು ಒಡವೆ ಮಾಡಿಸಿಕೊಡುವ ಸಾಧ್ಯತೆ ಇದೆ.


RELATED ARTICLES

Latest News