ನಿತ್ಯ ನೀತಿ : ಶಿಸ್ತು ಗೆಲುವಿನ ಅವಿಭಾಜ್ಯ ಅಂಗ. ಅಶಿಸ್ತಿನ ವಿರುದ್ಧ ಗೆಲುವು ಸಾಽಸಿದರೆ ಅರ್ಧ ಯಶಸ್ಸು ಸಾಧಿಸಿದಂತೆ.
ಪಂಚಾಂಗ : 28-02-2025, ಶುಕ್ರವಾರ
ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ಸೌರ ವಸಂತ ಋತು / ಫಾಲ್ಗುಣ ಮಾಸ /
ಶುಕ್ಲ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಶತಭಿಷಾ / ಯೋಗ: ಸಿದ್ಧ / ಕರಣ: ಕಿಂಸ್ತುಘ್ನ
ಸೂರ್ಯೋದಯ – ಬೆ.06.36
ಸೂರ್ಯಾಸ್ತ – 06.28
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ವಿವಾಹದ ಆಚೆಗಿನ ಸಂಬಂಧದ ಕಡೆಗೆ ಆಕರ್ಷಿತರಾಗಿ, ನೆಮ್ಮದಿ ಹಾಳಾಗುವ ಸಾಧ್ಯತೆ ಇದೆ.
ವೃಷಭ: ದೂರದ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತೋಷದ ವಾತಾವರಣ.
ಮಿಥುನ: ಮಿತ್ರರಿಂದ ಮನಸ್ಸಿಗೆ ನೋವಾಗು ವಂತಹ ಮಾತುಗಳನ್ನು ಕೇಳಬೇಕಾಗಬಹುದು.
ಕಟಕ: ಅನವಶ್ಯಕ ಚಿಂತನೆಯಿಂದ ಮಾನಸಿಕ ಯಾತನೆ ಅನುಭವಿಸಬೇಕಾಗಬಹುದು.
ಸಿಂಹ: ಧಾರ್ಮಿಕ ಕಾರ್ಯ ಗಳಿಗೆ ಹೆಚ್ಚು ಒತ್ತು. ತಾಯಿ ಯಿಂದ ಸಹಾಯ ಸಿಗಲಿದೆ.
ಕನ್ಯಾ: ಹಳೆ ಮಿತ್ರರನ್ನು ಭೇಟಿ ಮಾಡುವ ಅವಕಾಶ ಸಿಗಲಿದೆ.ಅತಿಯಾದ ಆತ್ಮವಿಶ್ವಾಸ ಬೇಡ.
ತುಲಾ: ನಿಮ್ಮ ನಡವಳಿಕೆ ಯಲ್ಲಿನ ಬದಲಾವಣೆ ಇತರರಿಗೆ ಚರ್ಚೆಯ ವಿಷಯವಾಗಲಿದೆ.
ವೃಶ್ಚಿಕ: ದುರಭ್ಯಾಸದಿಂದ ದೂರ ಉಳಿಯುವ ನಿಮ್ಮ ನಿರ್ಧಾರ ಪ್ರಯೋಜನಕಾರಿಯಾಗಲಿದೆ.
ಧನುಸ್ಸು: ಹಿತಶತ್ರುಗಳ ಒಳಸಂಚು ನಿಮ್ಮ ಗಮನಕ್ಕೆ ಬರಲಿದ್ದು, ಧೈರ್ಯದಿಂದ ಎದುರಿಸಿ.
ಮಕರ: ಧಾರ್ಮಿಕ ಕಾರ್ಯಗಳಲ್ಲಿ ತೊಡಗಬೇಕೆಂಬ ಆಲೋಚನೆಗಳು ಬರಲಿವೆ.
ಕುಂಭ: ಅತಿಥಿಗಳ ಆಗಮನದಿಂದಾಗಿ ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ. ಸ್ನೇಹಿತರ ಬೆಂಬಲ ಸಿಗಲಿದೆ.
ಮೀನ: ವ್ಯಾಪಾರಿಗಳಿಗೆ ಹಣದ ಒಳ ಹರಿವಿನಲ್ಲಿ ತೊಂದರೆಯಾಗಲಿದೆ. ಮಹಿಳೆಯರಿಗೆ ಖರ್ಚು ಹೆಚ್ಚು.