ನಿತ್ಯ ನೀತಿ ; ಬೇರೆಯವರ ಮಾತು ನಮಗೆ ಸರಿಬಾರದಿದ್ದರೆ ತಿರಸ್ಕರಿಸಬಹುದು. ಆದರೆ ನಮ ಮಾತು ನಮಗೇ ಹಿತವಾಗದಿದ್ದರೆ? ಹಾಗಾಗದಿರಲಿ. ಮಾತು ನಮ ಮನಕ್ಕೊಪ್ಪುವಂತಿರಲಿ.
ಪಂಚಾಂಗ ಶನಿವಾರ 11-01-2025
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ರೋಹಿಣಿ / ಯೋಗ: ಶುಕ್ಲ / ಕರಣ: ಕೌಲವ
ಸೂರ್ಯೋದಯ : ಬೆ.06.45
ಸೂರ್ಯಾಸ್ತ : 06.10
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30
ರಾಶಿ ಭವಿಷ್ಯ
ಮೇಷ: ಹಣ ಹೇಗೆ ವಿನಿಯೋಗ ಆಗಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಬಹಳ ಮುಖ್ಯ.
ವೃಷಭ: ಮನೆ ನಿರ್ಮಾಣ ಕೆಲಸದಲ್ಲಿರುವ ಅಡೆತಡೆ ಗಳು ಸಹೋದರರ ಸಲಹೆಗಳಿಂದ ದೂರವಾಗಲಿವೆ.
ಮಿಥುನ: ಉದ್ಯೋಗದ ಕಡೆಗೆ ಹೆಚ್ಚಿನ ಗಮನಹರಿಸಿ. ಖರ್ಚು ಹೆಚ್ಚಾಗಲಿದೆ.
ಕಟಕ: ಗಣ್ಯವ್ಯಕ್ತಿಗಳನ್ನು ಸಂಪರ್ಕಿಸುವಿರಿ.
ಸಿಂಹ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳಾಗಲಿವೆ.
ಕನ್ಯಾ: ಷೇರು ಮಾರುಕಟ್ಟೆ ಯಲ್ಲಿ ಹಣ ಹೂಡಿಕೆ ಮಾಡು ವವರು ಎಚ್ಚರಿಕೆಯಿಂದಿರಿ.
ತುಲಾ: ಬೇರೆಯವರು ನಿಮ್ಮೊಂದಿಗೆ ಗೆಳೆತನ ಬೆಳೆಸಲು ಬಯಸುತ್ತಾರೆ. ಜಾಗ್ರತೆ ವಹಿಸುವುದು ಬಹಳ ಸೂಕ್ತ.
ವೃಶ್ಚಿಕ: ಕೆಲಸ ಸ್ಥಳದಲ್ಲಿ ಕಿರಿಕಿರಿ ಉಂಟಾಗಿ ಕೆಲಸ ಬಿಡುವ ಮನಸ್ಸು ಕೂಡ ಮಾಡಬಹುದು.
ಧನುಸ್ಸು: ಮಕ್ಕಳ ವಿದ್ಯಾಭ್ಯಾಸದತ್ತ ಹೆಚ್ಚು ಗಮನ ಹರಿಸಿ. ಆಸ್ತಿ ಸಂಬಂಧಿ ವಿಚಾರದಲ್ಲಿ ಗೊಂದಲ.
ಮಕರ: ಹಿರಿಯರ ಸಕಾಲಿಕ ನೆರವಿನಿಂದ ಎದುರಾಗ ಬಹುದಾದ ವಿಪತ್ತುಗಳು ದೂರವಾಗಲಿವೆ.
ಕುಂಭ: ಉದ್ಯೋಗಸ್ಥ ಮಹಿಳೆಯರಿಗೆ ಶುಭ ದಿನ. ಕೃಷಿಕರಿಗೆ ಶುಭಫಲ ಸಿಗಲಿದೆ. ಉದ್ಯೋಗದಲ್ಲಿ ಲಾಭ.
ಮೀನ: ಸಹೋದರರು ಆರ್ಥಿಕ ಸಹಾಯ ಮಾಡುವರು. ಇದರಿಂದ ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಲಿದೆ.