ನವದೆಹಲಿ, ಆ.29- ಅಮೆರಿಕದೊಂದಿಗಿನ ಉದ್ವಿಗ್ನತೆ ದಿನೇ ದಿನೇ ತೀವ್ರಗೊಳ್ಳುತ್ತಿದ್ದರೂ ತಲೆ ಕೆಡಿಸಿಕೊಳ್ಳದ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಮತ್ತು ಚೀನಾ ಈ ಎರಡು ದೇಶಗಳಿಗೆ ನಾಲ್ಕು ದಿನ ಪ್ರವಾಸ ಕೈಗೊಂಡಿದ್ದಾರೆ.
ಸುಮಾರು 7 ವರ್ಷಗಳಲ್ಲಿ ಇದು ಅವರ ಮೊದಲ ಜಪಾನ್ ಭೇಟಿಯಾಗಿದೆ. ತಮ್ಮ ಈ ಭೇಟಿಯ ಸಂದರ್ಭದಲ್ಲಿ ಅವರು ಜಪಾನ್‌ನೊಂದಿಗೆ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಇದೇ ಸಂದರ್ಭದಲ್ಲಿ ಅವರು ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರೊಂದಿಗೆ ವಾರ್ಷಿಕ ಶೃಂಗಸಭೆಯ ಮಾತುಕತೆಗಳನ್ನು ನಡೆಸಲಿದ್ದಾರೆ.ಈ ಸಂದರ್ಭದಲ್ಲಿ ಇಶಿಬಾ ಮತ್ತು ಇತರರನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ, ಇದು ಅಸ್ತಿತ್ವದಲ್ಲಿರುವ ಪಾಲುದಾರಿಕೆಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ಸಹಕಾರದ ಹೊಸ ಮಾರ್ಗಗಳನ್ನು ಅನ್ವೇಷಿಸಲು ಅವಕಾಶವನ್ನು ಒದಗಿಸುತ್ತದ ಎಂದು ಮೋದಿ ಎಕ್ಸ್ ಮಾಡಿದ್ದಾರೆ.
ಜಪಾನ್ ಭಾರತದಲ್ಲಿ ಶತಕೋಟಿ ಡಾಲರ್ ಹೂಡಿಕೆ ಯೋಜನೆಗಳ ಗುರಿಯನ್ನು ಘೋಷಿಸಬಹುದು. ಜಪಾನಿನ ಮಾಧ್ಯಮ ವರದಿಗಳ ಪ್ರಕಾರ, ಜಪಾನ್ ಮುಂದಿನ ದಶಕದಲ್ಲಿ ಭಾರತದಲ್ಲಿ ತನ್ನ ಖಾಸಗಿ ವಲಯದ ಹೂಡಿಕೆಯನ್ನು 10 ಟ್ರಿಲಿಯನ್ ಯೆನ್ (68 ಬಿಲಿಯನ್) ಗೆ ದ್ವಿಗುಣಗೊಳಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.
ಪ್ರಧಾನಿ ಮೋದಿಯವರ ಭೇಟಿಯ ಸಮಯದಲ್ಲಿ ಜಪಾನಿನ ಪ್ರಧಾನಿ ಇಶಿಬಾ ಈ ಹೊಸ ಗುರಿಯನ್ನು ದೃಢಪಡಿಸಬಹುದು.ಎರಡೂ ಏಷ್ಯಾದ ರಾಷ್ಟ್ರಗಳು 17 ವರ್ಷಗಳಲ್ಲಿ ಮೊದಲ ಬಾರಿಗೆ ಭದ್ರತಾ ಸಹಕಾರದ ಕುರಿತಾದ ತಮ್ಮ ಜಂಟಿ ಘೋಷಣೆಯನ್ನು ತಿದ್ದುಪಡಿ ಮಾಡಲು ಯೋಜಿಸಿವೆ ಎಂದು ಜಪಾನಿನ ಪತ್ರಿಕೆ ನಿಕ್ಕಿ ಏಷ್ಯಾ ವರದಿ ಮಾಡಿದೆ.
ಆರ್ಥಿಕ ಭದ್ರತಾ ಸವಾಲುಗಳನ್ನು ಎದುರಿಸಲು ಎರಡು ಸರ್ಕಾರಗಳು ಹೊಸ ದ್ವಿಪಕ್ಷೀಯ ಸಹಕಾರ ಚೌಕಟ್ಟಾದ ಆರ್ಥಿಕ ಭದ್ರತಾ ಉಪಕ್ರಮವನ್ನು ಸಹ ಪ್ರಾರಂಭಿಸುತ್ತವೆ.
- ವರದಕ್ಷಿಣೆಗಾಗಿ ಸೋಸೆಗೆ ಆಸಿಡ್ ಕುಡಿಸಿ ಕೊಂದ ಧನ ಪಿಶಾಚಿಗಳು..!
- ತುಂಗಾಭದ್ರ ಜಲಾಶಯದಿಂದ ನೀರು ಬಿಡುವ ಸಾಧ್ಯತೆ, ನದಿಪಾತ್ರದ ಜನರಿಗೆ ಎಚ್ಚರಿಕೆ
- ಸ್ನಾನ ಮಾಡಲು ಹೋಗಿ ಮಯೂರಾಕ್ಷಿ ನದಿ ಪಾಲಾದ ನಾಲ್ವರು
- ದೇಶವನ್ನು ಕ್ರೀಡಾ ಶ್ರೇಷ್ಠತೆಯ ಕೇಂದ್ರ ಮಾಡುತ್ತೇವೆ ; ಪ್ರಧಾನಿ ಮೋದಿ
- ಭಾರತ ತೈಲ ಹಣ ವರ್ಗಾವಣೆ ಮಾಡುವ ಸಂಸ್ಥೆಯಾಗಿದೆ ಎಂದ ಪೀಟರ್ ನವರೊ