Monday, July 15, 2024
Homeಅಂತಾರಾಷ್ಟ್ರೀಯಕರಾಚಿಯಲ್ಲಿ ಅಪರಿಚಿತರಿಂದ ಹಿಜಬುಲ್ ಉಗ್ರ ಜಿಯಾ ಉರ್ ರೆಹಮಾನ್ ಹತ್ಯೆ..!?

ಕರಾಚಿಯಲ್ಲಿ ಅಪರಿಚಿತರಿಂದ ಹಿಜಬುಲ್ ಉಗ್ರ ಜಿಯಾ ಉರ್ ರೆಹಮಾನ್ ಹತ್ಯೆ..!?

ನವದೆಹಲಿ.ಸೆ.28: ಕೆನಡಾ ಪಾಕ್ ಸೇರಿದಂತೆ ವಿದೇಶಗಳಲ್ಲಿ ಭಾರತದ ದೇಶದ್ರೋಹಿಗಳ ಸರಣಿ ಹತ್ಯೆ ಸುದ್ದಿಗಳು ಇನ್ನೂ ಚರ್ಚಯಲ್ಲಿರುವಾಗಲೇ ಇದೀಗ ಹಿಜಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಪ್ರಮುಖ ಉಗ್ರ ಜಿಯಾ ಉರ್ ರೆಹಮಾನ್ ಪಾಕಿಸ್ತಾನದ ಕರಾಚಿಯಲ್ಲಿ ಅಪರಿಚಿತರಿಂದ ಹತ್ಯೆಯಾಗಿದ್ದನೆಂಬ ಸುದ್ದಿ ಹರಡಿದೆ.

ಕರಾಚಿಯಲ್ಲಿ ಅಪರಿಚಿತ ಬಂಧೂಕುಧಾದಿಗಳು ಜಿಯಾ ಉರ್ ರೆಹಮಾನ್ ನನ್ನು ಹತ್ಯೆಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಇನ್ನಷ್ಟೇ ಮಾಹಿತಿಗಳು ಲಭ್ಯವಾಗಬೇಕಿದೆ.

ಕಳೆದ ಹಲವು ದಿನಗಳಿಂದ ಈ ಮಾದರಿಯ ಸರಣಿ ಹತ್ಯೆಗಳಿಂದ ಪಾಕಿಸ್ತಾನದ ಗೂಢಾಚಾರಿ ಸಂಸ್ಥೆ ISI ಮತ್ತು ಪಾಕಿಸ್ತಾನದಲ್ಲಿನ ಉಗ್ರಸಂಘಟನೆಗಳಲ್ಲಿ ಆತಂಕ ಹೆಚ್ಚಾಗಿದೆ.

ಅಪರಿಚಿತ ಹಂತಕರ ಪತ್ತೆಗೆ ಪಾಕಿಸ್ತಾನದ ಗೂಢಾಚಾರಿ ಸಂಸ್ಥೆ ISI ಹರಸಾಹಸಪಡುತ್ತಿದೆ.

RELATED ARTICLES

Latest News