Sunday, December 1, 2024
Homeಇದೀಗ ಬಂದ ಸುದ್ದಿಐಪಿಎಸ್ ಅಧಿಕಾರಿಗಳ ವರ್ಗಾವಣೆ : ಮೈಸೂರು,ಹುಬ್ಬಳ್ಳಿ ಪೊಲೀಸ್ ಆಯುಕ್ತರ ಎತ್ತಂಗಡಿ

ಐಪಿಎಸ್ ಅಧಿಕಾರಿಗಳ ವರ್ಗಾವಣೆ : ಮೈಸೂರು,ಹುಬ್ಬಳ್ಳಿ ಪೊಲೀಸ್ ಆಯುಕ್ತರ ಎತ್ತಂಗಡಿ

ಬೆಂಗಳೂರು, ಜು.3- ಕೊಲೆ, ಅಪರಾಧ ಚಟುವಟಿಕೆಗಳು ಹೆಚ್ಚಾಗಿ ಜನಸಾಮಾನ್ಯರಲ್ಲಿ ಅಸಮಾಧಾನ ಉಂಟಾಗಿದ್ದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ, ನಗರ ಪೊಲೀಸ್ ಆಯುಕ್ತರು ಸೇರಿದಂತೆ 25 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಹುಬ್ಬಳ್ಳಿಯಲ್ಲಿ ಕಳೆದ ಮೂರು ತಿಂಗಳಲ್ಲಿ ಮೂರು ಭೀಕರ ಕೊಲೆಗಳಾಗಿದ್ದವು. ಇದರಿಂದ ಆತಂಕಗೊಂಡ ಹುಬ್ಬಳ್ಳಿ ಜನತೆ ಮಹಾನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಡ ಹಾಕಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಸೇರಿದಂತೆ ರಾಜ್ಯದ 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಐಪಿಎಸ್ ಅಧಿಕಾರಿ ರೇಣುಕಾ ಸುಕುಮಾರ್ ಅವರನ್ನು ತತ್ಕ್ಷಣ ಜಾರಿಗೆ ಬರುವಂತೆ ಎಐಜಿಪಿಯಾಗಿ ಬೆಂಗಳೂರು ಡಿಜಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್ ಅವರನ್ನು ನೇಮಿಸಲಾಗಿದೆ.

ನೇಹಾ-ಅಂಜಲಿ ಕೊಲೆ ನಡೆದಾಗ ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸಾರ್ವಜನಿಕರು ಪ್ರತಿಭಟನೆ ಸಹ ಮಾಡಿದ್ದರು. ಕೊನೆಗೂ ಸರ್ಕಾರ ಸಾರ್ವಜನಿಕರ ಹೋರಾಟಕ್ಕೆ ಮತ್ತು ಕಾಂಗ್ರೆಸ್ ಮುಖಂಡರ ಮನವಿಗೆ ಸ್ಪಂದಿಸಿ ರೇಣುಕಾ ಸುಕುಮಾರ್ ಅವರನ್ನು ವರ್ಗಾವಣೆ ಮಾಡಿದೆ.

ವರ್ಗಾವಣೆಯಾದ ಅಧಿಕಾರಿಗಳ ಪಟ್ಟಿ ಹೀಗಿದೆ:
ಲಾಬೂರಾಮ್: ಐಜಿಪಿ ಕೇಂದ್ರ ವಲಯ
ರವಿಕಾಂತೇಗೌಡ: ಐಜಿಪಿ ಕೇಂದ್ರ ಕಚೇರಿ-1
ಎನ್.ಶಶಿಕುಮಾರ್: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್
ಡಾ.ಕೆ.ತ್ಯಾಗರಾಜನ್: ಐಜಿಪಿ, ಐಎಸ್ಡಿ
ಬಿ.ರಮೇಶ್: ಡಿಐಜಿಪಿ ಪೂರ್ವ ವಲಯ ದಾವಣಗೆರೆ
ಸೀಮಾ ಲಾಟ್ಕರ್: ಪೊಲೀಸ್ ಆಯುಕ್ತ, ಮೈಸೂರು ನಗರ
ಎನ್.ವಿಷ್ಣುವರ್ಧನ್: ಎಸ್ಪಿ, ಮೈಸೂರು ಜಿಲ್ಲೆ
ರೇಣುಕಾ ಸುಕುಮಾರ್: ಎಐಜಿಪಿ (ಬೆಂಗಳೂರು ಡಿಜಿ ಕಚೇರಿ)
ಸಿ.ಕೆ.ಬಾಬಾ: ಎಸ್ಪಿ, ಬೆಂಗಳೂರು ಗ್ರಾಮಾಂತರ
ಸುಮನ್.ಡಿ.ಪೆನ್ನೇಕರ್: ಎಸ್ಪಿ, ಬಿಎಂಟಿಎ್
ಸಿ.ಬಿ.ರಿಷ್ಯಂತ್: ಎಸ್ಪಿ, ವೈರ್ಲೆಸ್
ಅರುಣಾಂಗ್ಷು ಗಿರಿ: ಎಸ್ಪಿ, ಸಿಐಡಿ
ಚನ್ನಬಸವಣ್ಣ: ಎಐಜಿಪಿ, ಆಡಳಿತ ಪ್ರಧಾನ ಕಚೇರಿ
ಎಂ.ನಾರಾಯಣ್: ಎಸ್ಪಿ, ಉತ್ತರ ಕನ್ನಡ
ಎಸ್‌‍.ಾತಿಮಾ: ಡಿಸಿಪಿ, ಬೆಂಗಳೂರು ಆಗ್ನೇಯ ವಿಭಾಗ
ಯತೀಶ್.ಎನ್: ಎಸ್ಪಿ, ದಕ್ಷಿಣ ಕನ್ನಡ ಜಿಲ್ಲೆ
ಡಿ.ಎಲ್.ನಾಗೇಶ್: ಡಿಸಿಪಿ, ಸಿಎಆರ್ಹೆಚ್ ಪ್ರಧಾನ ಕಚೇರಿ, ಬೆಂಗಳೂರು
ಪದಿನಿ ಸಾಹೋ: ಡಿಸಿಪಿ ಆಡಳಿತ, ಬೆಂಗಳೂರು ನಗರ
ಡಾ.ಟಿ.ಕವಿತಾ: ಎಸ್ಪಿ, ಚಾಮರಾಜನಗರ ಜಿಲ್ಲೆ
ಪ್ರದೀಪ್ ಗುಂಟಿ: ಎಸ್ಪಿ, ಬೀದರ್ ಜಿಲ್ಲೆ
ಬಿ.ನಿಖಿಲ್: ಎಸ್ಪಿ, ಕೋಲಾರ ಜಿಲ್ಲೆ
ಮಹಾನಿಂಗ್ ನಂದಗಾವಿ: ಡಿಸಿಪಿ ಕಾನೂನು ಸುವ್ಯವಸ್ಥೆ, ಹುಬ್ಬಳ್ಳಿ-ಧಾರವಾಡ
ಮಲ್ಲಿಕಾರ್ಜುನ ಬಾಲದಂಡಿ: ಎಸ್ಪಿ, ಮಂಡ್ಯ ಜಿಲ್ಲೆ
ವಿ.ಜೆ.ಡಾ.ಶೋಭಾ ರಾಣಿ: ಎಸ್ಪಿ, ಬಳ್ಳಾರಿ ಜಿಲ್ಲೆ
ಕುಶಾಲ್ ಚೌಕ್ಸಿ: ಎಸ್ಪಿ, ಚಿಕ್ಕಬಳ್ಳಾಪುರ ಜಿಲ್ಲೆ
ನೂತನ ಮೂರು ಕಾನೂನು ಜಾರಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

RELATED ARTICLES

Latest News