Wednesday, September 11, 2024
Homeರಾಜ್ಯಇಬ್ಬರು ಸಮುದಾಯ ಸಂಘಟನಾಧಿಕಾರಿಗಳ ವರ್ಗಾವಣೆ

ಇಬ್ಬರು ಸಮುದಾಯ ಸಂಘಟನಾಧಿಕಾರಿಗಳ ವರ್ಗಾವಣೆ

ಬೆಂಗಳೂರು, ಆ.22-ಪೌರಾಡಳಿತ ಸೇವೆಗೆ ಸೇರಿದ ಇಬ್ಬರು ಸಮುದಾಯ ಸಂಘಟನಾಧಿಕಾರಿಗಳನ್ನು ವರ್ಗಾವಣೆ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಗದಗ ನಗರಸಭೆಯ ಸಮುದಾಯ ಸಂಘಟನಾಧಿಕಾರಿ ಸ್ಥಾನಕ್ಕೆ ಬಿ.ಪ್ರಸಾದ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ಮಳವಳ್ಳಿ ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಸ್ಥಾನಕ್ಕೆ ವರ್ಗಾಯಿಸಿರುವುದನ್ನು ಮಾರ್ಪಡಿಸಿ ವಿಜಯಲಕ್ಷ್ಮೀ ಹಿರೇಮಠ ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಪ್ರಸಾದ್‌ ವರ್ಗಾವಾಗಿದ್ದಾರೆ.

ನರಗುಂದ ಪುರಸಭೆಯಲ್ಲಿ ಖಾಲಿ ಇದ್ದ ಸಮುದಾಯ ಸಂಘಟನಾಧಿಕಾರಿ ಸ್ಥಾನಕ್ಕೆ ವಿಜಯಲಕ್ಷ್ಮೀ ಹಿರೇಮಠ ಅವರನ್ನು ವರ್ಗಾವಣೆ ಮಾಡಲಾಗಿದೆ. ಇವರು ಗದಗ ನಗರಸಭೆಯ ಸಮುದಾಯ ಸಂಘಟನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

RELATED ARTICLES

Latest News