Sunday, April 28, 2024
Homeರಾಜ್ಯ"ಸಾರಿಗೆ ಇಲಾಖೆ ಖಾಸಗೀಕರಣ ಬೇಡ"

“ಸಾರಿಗೆ ಇಲಾಖೆ ಖಾಸಗೀಕರಣ ಬೇಡ”

ಬೆಂಗಳೂರು,ಮಾ.2- ಸಾರಿಗೆ ಇಲಾಖೆಯನ್ನು ಖಾಸಗೀರಣ ಮಾಡಲು ಮುಂದಾದರೆ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ ಎಚ್ಚರಿಸಿದೆ. ಈ ಕೂಡಲೆ ಸಾರಿಗೆ ಇಲಾಖೆಯನ್ನು ಖಾಸಗೀಕರಣ ಮಾಡುವ ಪ್ರಕ್ರಿಯೆಯನ್ನು ಕೈಬಿಡಬೇಕು ಇಲ್ಲದಿದ್ದರೆ ಮಾ.5 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಫೆಡರೇಷನ್ ಎಚ್ಚರಿಕೆ ನೀಡಿದೆ.

ಈಗಾಗಲೇ ಬಿಎಂಟಿಸಿಯಲ್ಲಿ 600 ಎಲೆಕ್ಟ್ರಿಕ್ ಬಸ್‍ಗಳನ್ನು ಖಾಸಗಿ ಮಾಲೀಕತ್ವದಲ್ಲಿ ಓಡಿಸಲಾಗುತ್ತಿದೆ. ಇದೀಗ ಮತ್ತೆ ಕೆಎಸ್‍ಆರ್‍ಟಿಸಿಯಲ್ಲಿ ಖಾಸಗಿ ಮಾಲೀಕತ್ವದಲ್ಲಿ 600 ಬಸ್ ಸಂಚಾರಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಸರ್ಕಾರ ಸಾರಿಗೆ ಇಲಾಖೆಯನ್ನು ಖಾಸಗೀಕರಣ ಮಾಡುವತ್ತ ಹೆಜ್ಜೆ ಇಟ್ಟಿರುವುದು ಸಾಬೀತಾಗಿದೆ.

ಹೀಗಾಗಿ ನಾವು ಖಾಸಗೀಕರಣ ಪ್ರಕ್ರಿಯೆಯನ್ನು ಕೈಬಿಡುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿಕೊಂಡಿದ್ದೇವೆ ಒಂದು ವೇಳೆ ನಮ್ಮ ಮಾತು ಮೀರಿ ಖಾಸಗೀಕರಣಕ್ಕೆ ಮುಂದಾದರೆ ಮಾ.5 ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟಟನೆ ನಡೆಸಲಾಗುವುದು ಎಂದು ಫೆಡರೇಷನ್ ಎಚ್ಚರಿಸಿದೆ.

RELATED ARTICLES

Latest News