Thursday, July 3, 2025
Homeರಾಜ್ಯಪ್ರಸಿದ್ದ ಪ್ರವಾಸಿ ತಾಣ ಎತ್ತಿನಭುಜದಲ್ಲಿ ಒಂದು ತಿಂಗಳು ಟ್ರೆಕ್ಕಿಂಗ್ ನಿಷೇಧ

ಪ್ರಸಿದ್ದ ಪ್ರವಾಸಿ ತಾಣ ಎತ್ತಿನಭುಜದಲ್ಲಿ ಒಂದು ತಿಂಗಳು ಟ್ರೆಕ್ಕಿಂಗ್ ನಿಷೇಧ

Trekking banned for a month in the famous tourist destination Yettinabhuj

ಚಿಕ್ಕಮಗಳೂರು, ಜು.2– ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಮೂಡಿಗೆರೆ ತಾಲೂಕಿನ ಪ್ರಸಿದ್ದ ಪ್ರವಾಸಿ ತಾಣ ಎತ್ತಿನಭುಜ ಚಾರಣಕ್ಕೆ ಅರಣ್ಯ ಇಲಾಖೆ ಒಂದು ತಿಂಗಳ ಕಾಲ ನಿಷೇಧ ಹೇರಿದೆ. ನಿರಂತರ ಮಳೆ, ಭಾರೀ ಮಂಜು ಕವಿಯುತ್ತಿರೋ ಕಾರಣದಿಂದ ನಿರ್ಬಂಧ ವಿಧಿಸಿದ್ದು ಪ್ರವಾಸಿಗರು ಮೂಡಿಗೆರೆ ತಾಲೂಕಿನ ಈ ಸುಪ್ರಸಿದ್ಧ ಪ್ರವಾಸಿ ತಾಣಕ್ಕೆ 7 ಕಿ.ಮೀ. ಚಾರಣ ಹೋಗಿ ಎತ್ತಿನಭುಜದ ಸೌಂದರ್ಯ ಸವಿಯುತ್ತಿದ್ದರು.

ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗಳು ಜಾರುತ್ತಿದ್ದು ಕೆಲವು ಮರಗಳು ಬೀಳುವ ಸ್ಥಿತಿಯಲ್ಲಿವೆ. ಚಾರಣದ ವೇಳೆ ಅನಾಹುತವಾದರೆ ರಕ್ಷಣೆ ಮಾಡುವುದು ಭಾರೀ ಕಷ್ಟಸಾಧ್ಯ.ಇಲ್ಲಿಗೆ ವಾಹನಗಳೂ ಹೋಗುವುದಿಲ್ಲ, ಏನಾದರೂ ಅಪಾಯ ಸಂಭವಿಸಿದರೆ ಹೆಗಲೇ ಹೊತ್ತೇ ತರಬೇಕು, ಜೊತೆಗೆ ಕಾಡುಪ್ರಾಣಿಗಳ ಕಾಟ.

ಜಾರುವ ಪ್ರದೇಶ ಇದಾಗಿದ್ದು ಈ ಎಲ್ಲಾ ಕಾರಣ ಮುಂದಿಟ್ಟು ಕೊಂಡು ಜುಲೈ 31ರವರೆಗೆ ಒಂದು ತಿಂಗಳ ಕಾಲ ಚಾರಣ ಸಂಪೂರ್ಣ ನಿಷೇಧಿಸಲಾಗಿದೆ.ಎತ್ತಿನಭುಜದಲ್ಲಿ ಓರ್ವ ಕಾವಲುಗಾರನನ್ನು ನೇಮಿಸಲು ಸೂಚನೆ ನೀಡಲಾಗಿದೆ. ಚಾರಣ ಬಂದ್ ಮಾಡುವಂತೆ ಇತ್ತೀಚಿಗೆ ಸ್ಥಳೀಯರು ಆಗ್ರಹಿಸಿದ್ದರು.

RELATED ARTICLES

Latest News