Wednesday, May 1, 2024
Homeಅಂತಾರಾಷ್ಟ್ರೀಯಅಮೆರಿಕದಲ್ಲಿ ಭಾರತೀಯ ಮೂಲದ ಹೋಟೆಲ್ ಮಾಲೀಕನ ಹತ್ಯೆ

ಅಮೆರಿಕದಲ್ಲಿ ಭಾರತೀಯ ಮೂಲದ ಹೋಟೆಲ್ ಮಾಲೀಕನ ಹತ್ಯೆ

ವಾಷಿಂಗ್ಟನ್, ಡಿ 8 (ಪಿಟಿಐ) ಅಮೆರಿಕದ ಉತ್ತರ ಕೆರೊಲಿನಾ ರಾಜ್ಯದ ನ್ಯೂಪೋರ್ಟ್ ನಗರದಲ್ಲಿ 46 ವರ್ಷದ ಭಾರತೀಯ ಮೂಲದ ಹೋಟೆಲ್ ಮಾಲೀಕನನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಪೊಲೀಸರು ಸ್ಥಳಕ್ಕೆ ಬಂದಾಗ ಮೋಟೆಲ್‍ನ ಹೊರಗೆ ಗುಂಡೇಟಿನ ಗಾಯದೊಂದಿಗೆ ಸತ್ಯನ್ ನಾಯಕ್ ಪತ್ತೆಯಾಗಿದ್ದಾರೆ.

ಹೊಸ್ಟೆಸ್ ಹೌಸ್‍ನಲ್ಲಿ ವ್ಯಕ್ತಿಯೊಬ್ಬ ಅತಿಕ್ರಮಣ ಮಾಡುತ್ತಿರುವ ಬಗ್ಗೆ ಕರೆ ಸ್ವೀಕರಿಸಿದೆ ಕೆಲವೆ ನಿಮಿಷಗಳ ನಂತರ ಗುಂಡು ಹಾರಿಸಲಾಗಿದೆ ಎಂಬ ಬಗ್ಗೆ ಕರೆಯನ್ನಾಧರಿಸಿ ಸ್ಥಳಕ್ಕೆ ಧಾವಿಸಿದಾಗ ನಾಯಕ್ ಗುಂಡೇಟಿನಿಂದ ಗಾಯಗೊಂಡಿದ್ದರು ಎಂದು ನ್ಯೂಪೋರ್ಟ್ ಪೊಲೀಸ್ ಮುಖ್ಯಸ್ಥ ಕೀತ್ ಲೂಯಿಸ್ ಹೇಳಿದರು.

ಆದರೂ ನಾಯಕ್ ಅವರು ಅಕ್ರಮಣಕಾರರಿಂದ ತಪ್ಪಿಸಿಕೊಂಡರು ತುರ್ತು ಸಿಬ್ಬಂದಿ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕಾರ್ಟೆರೆಟ್ ಹೆಲ್ತ ಕೇರ್‍ಗೆ ಕರೆದೊಯ್ದರು ಆದರೆ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಇಸ್ರೇಲ್ ದಾಳಿಯಲ್ಲಿ ಪ್ಯಾಲೆಸ್ತೀನ್ ಕವಿ ರೆಫಾತ್ ಅಲರೀರ್ ಸಾವು

ಇದು ಕುಟುಂಬದ ಒಡೆತನದ ವ್ಯವಹಾರವಾಗಿದೆ ಮತ್ತು ಅವರು ತಮ್ಮ ಕುಟುಂಬದೊಂದಿಗೆ ಪ್ರತಿದಿನ ಈ ವ್ಯವಹಾರವನ್ನು ನಿರ್ವಹಿಸುತ್ತಿದ್ದರು ಎಂದು ಲೆವಿಸ್ ಹೇಳಿದರು. ಕೊಲೆ ಮಾಡಿದ್ದಾನೆ ಎನ್ನಲಾದ ಟ್ರಾಯ್ ಕೆಲ್ಲಮ್ ಎಂಬಾತ ಹೊಸ್ಟೆಸ್ ಹೌಸ್‍ನ ಕೊಠಡಿಯೊಂದರಲ್ಲಿ ಬ್ಯಾರಿಕೇಡ್‍ನಲ್ಲಿ ಪತ್ತೆಯಾಗಿದ್ದಾನೆ.

59 ವರ್ಷದ ಕೆಲ್ಲಮ್ ಅವರು ಹೊಸ್ಟೆಸ್ ಹೌಸ್ ಮತ್ತು ಪ್ರದೇಶದ ಇತರ ಸ್ಥಳಗಳಲ್ಲಿ ಸ್ಕ್ವಾಟರ್ ಆಗಿದ್ದರು ಮತ್ತು ಆತ ನಿರಾಶ್ರಿತ ಎಂದು ಭಾವಿಸಲಾಗಿದೆ ಎಂದು ಲೂಯಿಸ್ ಹೇಳಿದರು. ಆತನನ್ನು ಬಂಸಲು ಪ್ರಯತ್ನಿಸಿದಾಗ ಆತ ತನ್ನ ಬಂದೂಕಿನಿಂದ ತಲೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.

RELATED ARTICLES

Latest News