Tuesday, October 22, 2024
Homeರಾಜ್ಯಹುತಾತ್ಮ ಪೊಲೀಸರಿಗೆ ನಮನ

ಹುತಾತ್ಮ ಪೊಲೀಸರಿಗೆ ನಮನ

Tribute to Martyr Police

ಬೆಂಗಳೂರು,ಅ.21- ಪೊಲೀಸ್‌‍ ಸಂಸ್ಮರಣಾ ದಿನಾಚರಣೆ ಅಂಗವಾಗಿ ಮೈಸೂರು ರಸ್ತೆಯ ಸಿ.ಎ.ಆರ್‌.ಕೇಂದ್ರ ಸ್ಥಾನದ ಹುತಾತರ ಉದ್ಯಾನದಲ್ಲಿ ಇಂದು ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಲಾಯಿತು. ಕಳೆದ ಸೆ.1 ರಿಂದ ಆ.31ರ ನಡುವಿನ ಒಂದು ವರ್ಷದ ಅವಧಿಯಲ್ಲಿ ಭಾರತದಾದ್ಯಂತ ಒಟ್ಟು 216 ವಿವಿಧ ದರ್ಜೆಯ ಪೊಲೀಸ್‌‍ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯನಿರ್ವಹಣೆಯ ಅವಧಿಯಲ್ಲಿ ಮೃತಪಟ್ಟಿದ್ದು, ಈ ಪೈಕಿ ರಾಜ್ಯದಲ್ಲಿ 12 ಪೊಲೀಸ್‌‍ ಅಧಿಕಾರಿ ಮತ್ತು ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ.

ಹುತಾತ್ಮರಾದವರು :
ಬೆಂಗಳೂರು ಕೆಎಸ್‌‍ಆರ್‌ಪಿ ಮೂರನೇ ಪಡೆ ಸಹಾಯಕ ಕಮಾಂಡೆಂಟ್‌ ಪ್ರಭಾಕರ್‌, ರಾಯಚೂರು ಜಿಲ್ಲೆ ಎಎಸ್‌‍ಐ ಜಗದೀಶ್‌, ತುಮಕೂರು ಜಿಲ್ಲೆ ಎಎಸ್‌‍ಐ ವೆಂಕಟೇಶ್‌, ಬೆಂಗಳೂರು ಜಿಲ್ಲೆಯ ಸಿಎಚ್‌ಸಿಗಳಾದ ದಾದಾವಲ್ಲಿ, ಹನುಮಂತರಾಜ್‌, ಬೆಂಗಳೂರು ನಗರ ಸಿಎಚ್‌ಸಿಗಳಾದ ಶ್ರೀನಿವಾಸ್‌‍, ಪೀರ್‌ ಖಾನ್‌, ಬೀದರ್‌ ಜಿಲ್ಲೆಯ ಸಿಎಚ್‌ಸಿಗಳಾದ ವಿಜಯಕುಮಾರ್‌, ಸಂಜೀವ್‌ಕುಮಾರ್‌, ವಿಜಯನಗರ ಐಆರ್‌ಬಿ ಸ್ಪೆಷಲ್‌ ಆರ್‌ಎಚ್‌ಸಿ ವಿಠ್ಠಲ್‌ ವೈ.ಗಡದ್ದಾರ್‌, ಕೆ.ಎಸ್‌‍.ಐ.ಎಸ್‌‍.ಎಫ್‌ ಮೂರನೇ ಪಡೆಯ ಪಿಸಿ ರುದ್ರಪ್ಪ ಸಿದ್ದಣ್ಣನವರ್‌ ಮತ್ತು ತುಮಕೂರು ಜಿಲ್ಲೆಯ ಮಹೇಶ್‌ ಹುತಾತರಾದವರು.

1959 ಅ.21 ರಂದು ಭಾರತ ಮತ್ತು ಚೈನಾ ದೇಶದ ಗಡಿ ಪ್ರದೇಶವಾದ ಲಡಾಕ್‌ನ ಹಾಟ್‌ಸ್ಪ್ರಿಂಗ್‌ ಎಂಬ ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಕೇಂದ್ರ ಮೀಸಲು ಪೊಲೀಸ್‌‍ ಪಡೆಯ ಎಸ್‌‍ಐ ಕರಂಸಿಂಗ್‌ ನೇತೃತ್ವದ 20 ಜನರ ತಂಡದ ಮೇಲೆ ನೆರೆಯ ಚೈನಾ ದೇಶದ ಸೈನಿಕರು ಹಠಾತ್‌ ಆಕ್ರಮಣ ಮಾಡಿದ್ದರಿಂದ ಕರಂ ಸಿಂಗ್‌ ಮತ್ತು ಇತರೆ 9 ಸಿಬ್ಬಂದಿ ಹುತಾತರಾದರು.

ಈ ಧಾರುಣ ಘಟನೆಯಲ್ಲಿ ಪ್ರಾಣತ್ಯಾಗ ಮಾಡಿದವರ ನೆನಪಿನಲ್ಲಿ ರಾಷ್ಟ್ರಾದ್ಯಂತ ಪ್ರತಿವರ್ಷ ಅ.21 ರಂದು ಪೊಲೀಸ್‌‍ ಸಂಸರಣಾ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.ಈ ದಿನ ರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಾಗ, ರಾಷ್ಟ್ರರಕ್ಷಣೆ ಮಾಡುವಾಗ ಮತ್ತು ಇತರೆ ಕರ್ತವ್ಯ ನಿರತ ಅವಧಿಯಲ್ಲಿ ಪ್ರಾಣತ್ಯಾಗ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಗೌರವಪೂರಕವಾಗಿ ಸರಿಸಲಾಗುತ್ತದೆ.

RELATED ARTICLES

Latest News