Friday, October 4, 2024
Homeರಾಷ್ಟ್ರೀಯ | Nationalಹೆತ್ತ ತಾಯಿಯನ್ನೇ ಮರಕ್ಕೆ ಕಟ್ಟಿ ಜೀವಂತ ದಹಿಸಿದ ಪಾಪಿ ಮಕ್ಕಳು..!

ಹೆತ್ತ ತಾಯಿಯನ್ನೇ ಮರಕ್ಕೆ ಕಟ್ಟಿ ಜೀವಂತ ದಹಿಸಿದ ಪಾಪಿ ಮಕ್ಕಳು..!

Tripura: 2 Men Arrested For 'Tying Their Mother To Tree, Burning Her Alive Over Family Dispute'

ಅಗರ್ತಲಾ,ಸೆ.30- ಹೆತ್ತ ಮಕ್ಕಳೆ ತಮ್ಮ ತಾಯಿಯನ್ನು ಮರಕ್ಕೆ ಕಟ್ಟಿ ಹಾಕಿ ಜೀವಂತವಾಗಿ ಸುಟ್ಟಿ ಹಾಕಿರುವ ಹೃದಯ ಹಿಂಡುವ ಘಟನೆ ತ್ರಿಪುರದಲ್ಲಿ ನಡೆದಿದೆ. ಪಶ್ಚಿಮ ತ್ರಿಪುರದಲ್ಲಿ 62 ವರ್ಷದ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಆಕೆಯ ಇಬ್ಬರು ಪುತ್ರರು ಜೀವಂತವಾಗಿ ಸುಟ್ಟು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುತ್ರರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದು, ಕೌಟುಂಬಿಕ ಕಲಹವೇ ಭೀಕರ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಚಂಪಕನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಖಮರ್ಬರಿಯಲ್ಲಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
62 ವರ್ಷದ ಮಹಿಳೆ ಸುಮಾರು ಒಂದೂವರೆ ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡ ನಂತರ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಆಕೆಯ ಇನ್ನೊಬ್ಬ ಮಗ ಅಗರ್ತಲಾದಲ್ಲಿ ವಾಸಿಸುತ್ತಿದ್ದ.

ಮಹಿಳೆಗೆ ಬೆಂಕಿ ಹಚ್ಚಲಾಗಿದೆ ಎಂಬ ಮಾಹಿತಿ ಪಡೆದ ನಂತರ, ಪೊಲೀಸ್‌‍ ತಂಡವು ಅಲ್ಲಿಗೆ ಧಾವಿಸಿತು ಮತ್ತು ಮರಕ್ಕೆ ಕಟ್ಟಿದ ಸುಟ್ಟ ದೇಹವನ್ನು ಕಂಡು ನಾವು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ದಿದ್ದೇವೆ ಎಂದು ಜಿರಾನಿಯಾದ ಉಪವಿಭಾಗದ ಪೊಲೀಸ್‌‍ ಅಧಿಕಾರಿ ಕಮಲ್‌ ಕಷ್ಣ ಕೊಲೊಯ್‌ ಪಿಟಿಐಗೆ ತಿಳಿಸಿದರು.

ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ನಾವು ಆಕೆಯ ಇಬ್ಬರು ಪುತ್ರರನ್ನು ಬಂಧಿಸಿದ್ದೇವೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು, ವಿಚಾರಣೆಗಾಗಿ ಪೊಲೀಸ್‌‍ ಕಸ್ಟಡಿಗೆ ಕೋರಲಾಗಿದೆ. ಕೌಟುಂಬಿಕ ಕಲಹ ಘಟನೆಗೆ ಕಾರಣವಾಗಿರಬಹುದು ಎಂದು ಶಂಕಿಸಿರುವ ಅವರು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

RELATED ARTICLES

Latest News